ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ವತಿಯಿಂದ ಮಹಿಳೆಯರ ಸ್ಪರ್ಧಾ ಕೂಟ
Update: 2024-12-30 16:34 GMT
ಬಜ್ಪೆ: ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ವತಿಯಿಂದ ಮಾಧಕ ವಸ್ತು ವಿರೋಧಿ ಜಾಗೃತಿ ಅಭಿಯಾನದ ಪ್ರಯುಕ್ತ ಮಹಿಳೆಯರ ಸ್ಪರ್ಧಾ ಕೂಟ ಕಾರ್ಯಕ್ರಮವು ಅನ್ಸಾರ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರ್ ಶಿಕ್ಷಣ ಸಂಸ್ಥೆಗಳ ಮೂಖ್ಯೋಪಾಧಾಯಿನಿ ಜಯಶ್ರೀ ಜಿ.ಎಸ್. ವಹಿಸಿದ್ದರು. ಕೆಪಿಸಿಸಿ ವಕ್ತಾರೆ ಯು.ಟಿ. ಆಯಿಷಾ ಫರ್ಝಾನ ಕಾರ್ಯಕ್ರವನ್ನು ಉದ್ಘಾಟಿಸಿದರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹೋಲಿ ಫ್ಯಾಮಿಲಿ ಫ್ರೌಡಶಾಲೆಯ ಮುಖ್ಯೋಪಾಧಾಯಿನಿ ಸಿಸ್ಟರ್ ಜೆಸ್ಸಿ ಪ್ರೀಮಾ, ಹದಿಹರೆಯದ ಶಿಕ್ಷಣ ತರಬೇತುದಾರರಾದ ವನಿತಾ ಅರುಣ್ ಭಂಡಾರಿ ಉಪಸ್ಥಿತರಿದ್ದರು. ಆಯಿಷಾ ಮುಬೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಹಿನಾ ಶಾಫಿ ಧನ್ಯವಾದ ಸಲ್ಲಿಸಿದರು.