ಕಾರ್ಮಿಕ ವಿಮಾ ಆಸ್ಪತ್ರೆಗೆ ಸಂಸದ ಬ್ರಿಜೇಶ್ ಚೌಟ ದಿಢೀರ್ ಭೇಟಿ

Update: 2025-01-01 13:44 GMT

ಮಂಗಳೂರು: ನಗರದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ದ.ಕ. ಸಂಸದ ಬ್ರಿಜೇಶ್ ಚೌಟ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ರೋಗಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಆಸ್ಪತ್ರೆಯ ಹಿರಿಯ ಅಧಿಕಾರಿ ಗಳ ಅನುಪಸ್ಥಿತಿ ಕಂಡುಬಂತು. ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಸಂಸದರು ರೋಗಿಗಳ ಸಮಸ್ಯೆಗೆ ಕಾರಣ ವಾದ ಸರ್ವರ್ ದೋಷವನ್ನು ಸರಿಪಡಿಸಲು ಅಧಿಕಾರಿಗಳು ನೀಡಲಾಗಿರುವ ದೂರುಗಳ ಪತ್ರಗಳನ್ನು ಹಾಜರುಪಡಿಸು ವಂತೆ ಸೂಚಿಸಿದರು.

ಹಲವಾರು ದಿನಗಳಿಂದ ಇಲ್ಲಿಗೆ ಬರುವ ರೋಗಿಗಳಿಗೆ ಸರ್ವರ್ ದೋಷವಿದೆ ಎಂದು ಹೇಳಿ, ದೂರದ ಊರುಗಳಿಂದ ಬರುವ ರೋಗಿಗಳು ಸತಾಯಿಸುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸಂಸದರು ಸರ್ವರ್ ಸಮಸ್ಯೆ ಇದ್ದರೆ ಇತರ ಆಸ್ಪತ್ರೆ ಗಳಿಗೆ ನೀಡುವ ಪತ್ರಗಳನ್ನು ಅಂತರ್ಜಾಲದಲ್ಲಿ ಆಗದಿದ್ದರೆ ಕೈ ಬರಹ ಮೂಲಕ ನೀಡಿ ಕೊಡಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು.

ರೋಗಿಯೊಬ್ಬರ ಸಂಬಂಧಿಕರು ಹಲವು ವರ್ಷಗಳಿಂದ ಡಯಬಿಟಿಸ್ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಒಂದು ತಿಂಗಳಿಗೆ 12  ಟೋಕನ್ ನೀಡಲಾಗುತ್ತಿತ್ತು. ಆದರೆ ಈಗ 3 ತಿಂಗಳಿಗೆ ಟೋಕನ್ ನೀಡಲಾಗುತ್ತಿದೆ. ಇದರಿಂದ ಸಕಾಲದಲ್ಲಿ ಡಯಾಲಿಸಿಸ್ ಮಾಡಲಾಗದೆ ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಡಯಾಲಿಸಿಸ್ ಮಾಡಿಕೊಳ್ಳುವಂತಾಗಿದೆ ಎಂದು ದೂರಿದರು.

ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಮಾತ್ರ ಟೋಕನ್ ನೀಡಲಾಗುವುದು ಎನ್ನುವ ನಿಯಮ ಜಾರಿ ಮಾಡಿದ್ದಾರೆ. ಇದರಿಂದಲೂ ಸಮಸ್ಯೆಯಾಗಿದೆ ಎಂದರು.

ಪರಿಶೀಲನೆಯ ಬಳಿಕ ರೋಗಿಗಳಿಗೆ ಅವಶ್ಯವಾಗಿರುವ ಸೂಕ್ತ ದಾಖಲೆಗಳನ್ನು ಸ್ಥಳದಲ್ಲೇ ದೊರಕಿಸಿಕೊಟ್ಟರಲ್ಲದೆ, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News