ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ: ಪದಾಧಿಕಾರಿಗಳ ಆಯ್ಕೆ
Update: 2025-01-01 14:00 GMT
ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ ಅಧ್ಯಕ್ಷರಾಗಿ ಯಾಸಿನ್ ಕುದ್ರೋಳಿ ಹಾಗೂ ಪ್ರಧಾನ ಕಾರ್ಯ ದರ್ಶಿಯಾಗಿ ಬಿ. ಅಬೂಬಕರ್ ಮತ್ತು ಕೋಶಾಧಿಕಾರಿಯಾಗಿ ಮಕ್ಬೂಲ್ ಜಾಮಿಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐಕ್ಯತಾ ವೇದಿಕೆಯ ಕಚೇರಿಯಲ್ಲಿ ಮಂಗಳವಾರ ಯಾಸೀನ್ ಕುದ್ರೋಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಚಾಲಕರಾಗಿ ಅಝೀಝ್ ಕುದ್ರೋಳಿ, ಉಪಾಧ್ಯಕ್ಷರಾಗಿ ಸಂಸುದ್ದೀನ್ ಎಚ್‌ಬಿಟಿ, ಮಾಜಿ ಮೇಯರ್ ಕೆ. ಅಶ್ರಫ್, ಅಶ್ರಫ್ ಮಾಸ್ ಕಲೀಲ್ ಬಾಯಿ ಜಾಮಿಯಾ, ಹಾರಿಸ್ ಕುದ್ರೋಳಿ, ಕಾರ್ಯದರ್ಶಿಯಾಗಿ ಮಾಕ್ಬೂಲ್ ಜಾಮಿಯಾ, ಸಂಘಟನಾ ಕಾರ್ಯದರ್ಶಿಯಾಗಿ ಮುಜೈರ್ ಕುದ್ರೋಳಿ, ಮಾದ್ಯಮ ಕಾರ್ಯದರ್ಶಿಯಾಗಿ ಎನ್.ಕೆ. ಅಬೂಬಕ್ಕರ್ ಮತ್ತು ವಹಾಬ್ ಕುದ್ರೋಳಿ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಮುಸ್ತಾಕ್ ಕುದ್ರೋಳಿ, ಇಸ್ಮಾಯಿಲ್ ಬಿ.ಎ., ಲತೀಫ್ ಕ್ರಿಸ್ಟಲ್, ಅಶ್ರಫ್ ಕಿನಾರ, ಇಕ್ಬಾಲ್ ಕುದ್ರೋಳಿ, ಲತೀಫ್ ಕೆ.ಕೆ. ಆಯ್ಕೆಯಾಗಿದ್ದಾರೆ.