ಸೋಮೇಶ್ವರ ಪುರಸಭೆ: ಸಾಮಾನ್ಯ ಸಭೆ ಬಹಿಷ್ಕರಿಸಿದ ಆಡಳಿತ ಪಕ್ಷ
ಉಳ್ಳಾಲ: ಹನುಮಾನ್ ನಗರ, ಕೊಳಂಗರೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸ ಮಾಡದೆ ಗುತ್ತಿಗೆ ದಾರ ಯೂಸುಫ್ ಅವರಿಗೆ ಬಿಲ್ ಪಾವತಿ ಮಾಡಿದ ವಿಚಾರದಲ್ಲಿ ಆಡಳಿತಾ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆದ ಘಟನೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ
ಹರೀಶ್ ಅವರು ಹನುಮಾನ್ ನಗರ ರಸ್ತೆ ಹಂಪ್ ಕಾಮಗಾರಿ ಯಾವುದು ಸಮರ್ಪಕ ಆಗಿಲ್ಲ. ಅರ್ದಂರ್ದ ಕಾಮಗಾರಿ ಮಾಡಿದ ಗುತ್ತಿಗೆ ದಾರರಿಗೆ ಬಿಲ್ ಪಾವತಿ ಮಾಡಿರುವುದು ಸರಿಯಲ್ಲ ಎಂದು ಹರೀಶ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮತಡಿ ಅವರು ಗುತ್ತಿಗೆ ವಹಿಸಿಕೊಂಡ ಯೂಸುಫ್ ಅವರಿಗೆ ಪೂರ್ಣ ಮೊತ್ತ ನೀಡಿಲ್ಲ. ಸಣ್ಣ ಮೊತ್ತದ ಚೆಕ್ ನೀಡಲಾಗಿದೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೌನ್ಸಿಲರ್ ಹರೀಶ್ ಅವರು, ಕಾಮಗಾರಿ ಪೂರ್ಣ ಮಾಡದೆ ಚೆಕ್ ನೀಡಬಾರದು.ಗುತ್ತಿಗೆ ವಹಿಸಿಕೊಂಡ ಯೂಸುಫ್ ಅವರು ಕೆಲಸವೇ ಮಾಡಿಲ್ಲ. ಸ್ಥಳೀಯರು ನಮ್ಮಲ್ಲಿ ಕೇಳುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷರ ಗಮನ ಸೆಳೆಯದೇ ಗುತ್ತಿಗೆ ದಾರನಿಗೆ ಬಿಲ್ ಪಾವತಿ ಮಾಡಿರುವುದು ಸರಿಯಲ್ಲ. ಗುತ್ತಿಗೆ ವಹಿಸಿಕೊಂಡ ಯೂಸುಫ್ ಆನ್ ಲೈನ್ ಗುತ್ತಿಗೆ ದಾರ. ಕೆಲಸ ಮಾಡುವವರು ಬೇರೆ ಜನ. ಆದರೆ ಕೆಲಸ ಆಗುವ ಮೊದಲೇ ಬಿಲ್ ಪಾವತಿ ಮಾಡಿರುವುದು ಎಷ್ಟು ಸರಿ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಇದೇ ವಿಚಾರದಲ್ಲಿ ಆಡಳಿತಾ ರೂಡ ಬಿಜೆಪಿ ಸದಸ್ಯರ ವ್ಯಾಪಕ ವಿರೋಧ ಸಭೆಯಲ್ಲಿ ವ್ಯಕ್ತವಾಯಿತು. ಸಮಸ್ಯೆ ಇತ್ಯರ್ಥ ಆಗುವವರೆಗೆ ಸಭೆ ಬೇಡ ಎಂಬ ಅಭಿಪ್ರಾಯ ಕೂಡ ಸಭೆಯಲ್ಲಿ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ 2023-24 ನೇ ಸಾಲಿನ 15ನೇ ಹಣಕಾಸು ಮುಕ್ತ ನಿಧಿ ಅನುದಾನದಲ್ಲಿ ಹನುಮಾನ್ ನಗರ, ಕೊಳಂಗರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣ ಗೊಳಿಸುವ ಮೊದಲೇ ಬಿಲ್ ಪಾವತಿ ಮಾಡಿದ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಆಡಳಿತಾ ರೂಡ ಬಿಜೆಪಿ ಸದಸ್ಯರು ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು.
ಕುಡಿಯುವ ನೀರು ಸಮಸ್ಯೆ, ಆಗದ ಪೈಪ್ ಲೈನ್ ಕಾಮಗಾರಿ,ಆರು ತಿಂಗಳಿಂದ ಪೂರೈಕೆ ಆಗದ ಕುಡಿಯುವ ನೀರಿನ ಬಗೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಪಿಲಾರ್ ಅವರು ಪಿಲಾರ್ ವಾರ್ಡ್ ನಲ್ಲಿ ಮಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ದೀಪಕ್ ಪಿಲಾರ್ ಪೈಪ್ ಲೈನ್ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ಮಾಡು ತ್ತಿಲ್ಲ.ನೀರು ಕೂಡ ಬರುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಅವರು ಕುಡಿಯುವ ನೀರು ಇಲ್ಲದೆ ಆಗುವುದು ಅಪರಾಧ.ಈ ಬಗೆ ಕ್ರಮ ಆಗಲೇಬೇಕು. ಈ ವಿಚಾರದಲ್ಲಿ ಗುತ್ತಿಗೆ ವಹಿಸಿಕೊಂಡವರು ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗುವುದು.ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮನೋಜ್ ಅವರು, ಎಲ್ಲಕ್ಕಿಂತ ಮೊದಲು ನೀರಿನ ಸಮಸ್ಯೆ ಪರಿಹಾರ ಆಗಬೇಕು. ಕುಡಿಯುವ ನೀರಿನ ಪರಿಹಾರಕ್ಕೆ ಪುರಸಭೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಉಳಿದ ವಿರೋಧ ಪಕ್ಷದ ಸದಸ್ಯರು: ಕೇವಲ ಬಿಲ್ ಪಾವತಿ ವಿಚಾರದಲ್ಲಿ ಆಡಳಿತ ರೂಡ ಸದಸ್ಯರು, ಸಭೆ ಯಿಂದ ಹೊರ ನಡೆದ ಬಳಿಕ ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಉಳಿದುಕೊಂಡರು. ಅರ್ಧ ಗಂಟೆ ಕಾಲ ಸಭೆಯಲ್ಲಿ ಕುಳಿತ ಸದಸ್ಯರು ಮುಖ್ಯಾಧಿಕಾರಿ ಸಭೆ ಮುಂದೂಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ ಬಳಿಕ ವಿರೋಧ ಪಕ್ಷದ ಸದಸ್ಯರು ಸಭೆಯಿಂದ ಹೊರಟರು.