ಆರೋಗ್ಯಯುತ ಸಮಾಜ ನಿರ್ಮಿಸೋಣ: ಡಾ. ರೋಹನ್ ಮೊನಿಸ್

ಕೊಣಾಜೆ: ಕಣಚೂರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸೈಂಟ್ ಅಲೋಶಿಯಸ್ ಸ್ವಾಯತ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ವಿಭಾಗದ ಸಹಯೋಗದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ 'ಪ್ರತಿಯೊಂದು ಹೃದಯದ ಮಿಡಿತವೂ ಅಮೂಲ್ಯ' ಎಂಬ ವಿಷಯದ ಬಗ್ಗೆ ಕಲಿಕಾ ಅಧಿವೇಶನ ಮತ್ತು ಪ್ರಾಯೋಗಿಕ ಕಾರ್ಯಾಗಾರವು ಮಂಗಳವಾರ ನಡೆಯಿತು.
ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೊನಿಸ್ ಮಾತನಾಡಿ ಇಂತಹ ಕಾರ್ಯಗಾರಗಳು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದಲ್ಲ ವೈದ್ಯಕೀಯೇತರ ಕ್ಷೇತ್ರದಲ್ಲಿ ಇರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಈ ಮೂಲಕ ಆರೋಗ್ಯಯುತವಾದ ಸಮಾಜ ವನ್ನು ಸೃಷ್ಟಿಸುವ ಕೆಲಸವನ್ನು ಮಾಡಬೇಕು ಎಂದರು.
ಕಣಚೂರು ವೈದ್ಯಕೀಯ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಡಾ. ಮೊಹಮ್ಮದ್ ಅಫ್ಸಲ್, ಡಾ. ಅಫೀಫಾ ಹಕೀಮ್, ಪದುವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರೋಷನ್ ಸಂತು ಮಯೂರ, ಎನ್ ಎಸ್ ಎಸ್ ಎಸ್ ಸಂಯೋಜಕ ಶಶಿಧರ್ ಮತ್ತು ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಯೋಜಕ ಅಲಿ ಮುಸ್ಬಾ ಉಪಸ್ಥಿತರಿದ್ದರು.