ಮಂಗಳೂರಿನಲ್ಲಿ ನಿವೀಯಸ್ ಮ್ಯಾರಥಾನ್: 5 ಸಾವಿರ ಮಂದಿ ಭಾಗಿ

Update: 2024-11-10 18:36 GMT

ಮಂಗಳೂರು: ನಗರದಲ್ಲಿ ನಿವೀಯಸ್ ಮ್ಯಾರಥಾನ್ 2024 - ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಓಟಗಾರರು, ಮಂಗಳೂರು ಮತ್ತು ಹೊರಗಿನಿಂದ, ಪ್ರಾರಂಭದ ಹಂತದಲ್ಲಿ ಒಟ್ಟುಗೂಡಿದರು.

ಮಂಗಳಾ ಸ್ಟೇಡಿಯಂ ನಲ್ಲಿ ಫುಲ್ ಮ್ಯಾರಥಾನ್ ಮುಖ್ಯಸ್ಥ ನಿವೀಯಸ್ ಸೊಲ್ವೆಶನ್ಸ್‌ನ ಮುಖ್ಯಸ್ಥ ಶಶಿರ್ ಶೆಟ್ಟಿ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ,ಈವೆಂಟ್ ರಾಯಭಾರಿ ಸತೀಶ್ ಗುಜರನ್ ಮತ್ತು ಹಿರಿಯ ಉಪಾಧ್ಯಕ್ಷ ಕೆವಿನ್ ಪಿರೇರಾ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು.

ಪ್ರೊಕ್ಯಾಮ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷರು ಮತ್ತು ಸಂಸ್ಥೆಯ ಸಿಇಒ ಸುಯೋಗ್ ಶೆಟ್ಟಿ ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಉದ್ಯಮಿ ಶಿವಾನಂದ್ ಮತ್ತು ಶಿವಾನಂದ್ ರಾವ್ ಸಾಥ್ ನೀಡಿದರು.

1,200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದ 10ಕೆ ಓಟಕ್ಕೆ ಮಂಗಳೂರು ಮೇಯರ್ ಮನೋಜ್ ಕುಮಾರ್ ಚಾಲನೆ ನೀಡಿದರು. ಉದ್ಯಮಿ ಅನಂತೇಶ್ ಪ್ರಭು ಅವರು ಸೇರಿಕೊಂಡರು, ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ಫೆಡ್ ಬ್ಯಾಂಕ್ ಫೈನಾನ್ಶಿಯಲ್ ಸಿಟಿಒ ಕುನಾಲ್ ದೀಕ್ಷಿತ್, ಜೆಡಬ್ಲ್ಯುಎಸ್ ಐಟಿ ಹೆಡ್ ನೀಲ್ ಮಣಿ ಸಾಹು, ಶ್ರೀರಾಮ್ ಗ್ರೂಪ್‌ನ ಪ್ರಭು ಎಸ್ ಉಪಸ್ಥಿತರಿದ್ದರು.

5ಕೆ ಓಟವು ವಿದ್ಯಾರ್ಥಿಗಳನ್ನು ಒಳಗೊಂಡಿತ್ತು, ಹೆಚ್ಚಿನ ಸಂಖ್ಯೆಯ ಎಂಆರ್‌ಪಿಎಲ್‌ನ ಡಿಜಿಎಂ ಕೃಷ್ಣ ಹೆಗ್ಡೆ, ಕಶರ್ಪ್ ಫಿಟ್‌ನೆಸ್ ಎಂಡಿ ಆನಂದ್ ಪ್ರಭು ಚಾಲನೆ ನೀಡಿದರು. 

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ರಾಯಭಾರಿ ಸತೀಶ್ ಗುಜರನ್, ರನ್ನ ರಾಯಭಾರಿಗಳಾದ ದೀಪ್ತಿ, ಕಾರ್ತಿಕ್ ಮತ್ತು ಪಾಲ್ ಓಟದ ಸಮುದಾಯದ ಹೆಸರಾಂತ ವ್ಯಕ್ತಿಗಳನ್ನು ಅವರ ಕೊಡುಗೆಗಳಿಗಾಗಿ ಗೌರವಿಸಲಾಯಿತು.

ಫುಲ್ ಮ್ಯಾರಥಾನ್‌ನ ಮುಕ್ತ ಪುರುಷರ ವಿಭಾಗದಲ್ಲಿ ಉಡುಪಿಯ ಸಚಿನ್ ವಿಜೇತರಾಗಿ ಹೊರಹೊಮ್ಮಿದರು. ಅಸ್ಸಾಂನ ಬಿಜೋಯಾ ಬರ್ಮನ್ ಮುಕ್ತ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

ನಿವೀಯಸ್ ಮಂಗಳೂರು ಮ್ಯಾರಥಾನ್

ಫಲಿತಾಂಶ :ಮಹಿಳೆಯರ ವಿಭಾಗ

1. ಉಷಾ ಆರ್ (0:18:53 ), 2. ಪ್ರತೀಕ್ಷಾ( 0:20:41 ),

3 .ಅಶ್ವಿನಿ ಕೆ ಎನ್ (0:25:13 )

35 ರಿಂದ 44 ಹರೆಯದ ಮಹಿಳೆಯರ ವಿಭಾಗ

1. ಮೋಹನ ರಂಜಿತಾ (0:26:26 ), 2.ಡಾ. ಜೂಲಿ ಮಿಸ್ಕ್ವಿತ್ (0:30:37 ), 3. ಸ್ಮಿತಾ ಆಶಾ (0:34:35 )

45 ರಿಂದ 59 ವರ್ಷ ಮಹಿಳೆಯರ ವಿಭಾಗ

1.ಬಿಎಚ್ ವಿದ್ಯಾ (0:26:37 ), 2 .ಎನ್.ಆರ್.ಶೋಭಾ.(0:26:51 ), 3. ಶೀಲಾ ಕ್ಯಾಸ್ಟೆಲಿನೊ (0:31:45 )

60 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ

1 .ಬಿ ಸಿ ಪಾರ್ವತಿ. (0:32:52 ), 2 .ಅಮೃತಾ ಕಲಾ (0:36:37 ), 3.ರಾಜೇಶ್ವರಿ ಬಿಎಸ್( 0:37:57 )

ಪುರುಷರ ವಿಭಾಗ

1.ಗೋವಿಂದರಾಜ್ ಎಚ್ (0:16:01), 2. ಅಖಿಲೇಶ್ ಕುಮಾರ್ (0:16:56 ), 3 . ಲಾರಾ ಫ್ರಾನ್ಸಿಸ್ (0:17:35 )

35 ರಿಂದ 44 ವರ್ಷ ಪುರುಷರ ವಿಭಾಗ

1ಸುನಿಲ್ ರೇಗೋ (0:19:11 ), 2. ಅನೀಶ್ ಕೆ (0:20:11), 3. ಚಂದ್ರನ್ ವಿ ವಿ (0:20:31 )

45 ರಿಂದ 59 ವರ್ಷ ಪುರುಷರ ವಿಭಾಗ

1. ರವಿ ಕುಪ್ಪುಸ್ವಾಮಿ( 0:21:27 ), 2. ಸುರೇಶ ಪಿ ಟಿ (0:22:02) ,

3. ಮೇದಪ್ಪ ಪಿ( 0:22:14 )

60 ವರ್ಷ ಮತ್ತು ಮೇಲ್ಪಟ್ಟ ಪುರುಷ ವಿಭಾಗ

1.ಹೊಸೂರು ಉದಯಕುಮಾರ್ ಶೆಟ್ಟಿ (0:23:31 ),

2 . ಸೆಲ್ವರಾಜ್ ಚಿಕ್ಕಿಯಾ (0:23:43 ),

3 .ವಿಟ್ಟಲ ಶೆಟ್ಟಿಗಾರ್ (0:24:37)












Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News