ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ, ಮಹಿಳಾ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ
Update: 2025-01-27 11:40 IST

ಮಂಗಳೂರು : ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮತ್ತು ಮಹಿಳಾ ಪಿಯು ಕಾಲೇಜು ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯು ಜ.26 ರಂದು ಶಾಲಾ ಮೈದಾನದಲ್ಲಿ ನಡೆಯಿತು.
ಶಾಲೆಯ ಕಾರ್ಯದರ್ಶಿಗಳಾದ ಹಾಜಿ ಅಬ್ದುಲ್ ಮಜೀದ್ ಸಿತಾರ್ ಅವರು ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಕುರಿತು ಮಾತಾಡಿದರು.
ಶಾಲಾ ಸಂಚಾಲಕರಾದ ರಿಯಾಝ್ ಅಹ್ಮದ್ ಸಂವಿಧಾನ ಕುರಿತು ಮಾತಾಡಿದರು.
ಪ್ರಾರ್ಥನೆಯನ್ನು 10 ನೇ ತರಗತಿಯ ವಿದ್ಯಾರ್ಥಿನಿಯಾದ ನಿದಾ ನೆರವೇರಿಸಿದರು. ಶಾಲಾ ಅರೇಬಿಕ್ ಅಧ್ಯಾಪಕರಾದ ಮುಹಮ್ಮದ್ ಇರ್ಫಾನ್ ಅಸ್ಲಮಿಯವರು ಮತ್ತು ಮರಿಯಮ್ಮ ಅರ್ಷಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಮುಖ್ಯ ಅಧ್ಯಾಪಕಿಯಾದ ಶಂಶಾದ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು, ಅಧ್ಯಾಪಕಿಯಾದ ಜಯಲತ ಕಾರ್ಯಕ್ರಮ ನಿರೂಪಿದರು, ಪ್ರಾಂಶುಪಾಲರಾದ ವಿಶಾಲಾಕ್ಷ್ಮಿ ವಂದಿಸಿದರು.