ಸೌದಿ ಅರೇಬಿಯಾ ಜುಬೈಲ್: ಮಂಗಳೂರು ಯೂತ್ ಫೆಡರೇಶನ್ ಅಸ್ತಿತ್ವಕ್ಕೆ

Update: 2023-11-23 13:18 GMT

ಜುಬೈಲ್ : ಸಮಯದಾಯದ ಅಭಿವೃದ್ದಿಯ ಹಿತದೃಷ್ಟಿಯಿಂದ ಮಂಗಳೂರು ನಗರದ ಆಸುಪಾಸಿನ ಅನಿವಾಸಿಗಳ ಸಂಘಟಿತ ಸಂಸ್ಥೆ ‘ಮಂಗಳೂರು ಯೂತ್ ಫೆಡರೇಶನ್’(ಎಂವೈಎಫ್)ಗೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಎಂವೈಎಫ್ ಸಂಘಟನೆಯಲ್ಲಿ ಮಂಗಳೂರು ಆಸುಪಾಸಿನ ಕುದ್ರೋಳಿ, ಬಂದರ್, ಬೆಂಗರೆ, ಪಾಂಡೇಶ್ವರ, ಬಿಜೈ ಮತ್ತಿತರ ಪ್ರದೇಶಗಳ ಅನಿವಾಸಿಗಳಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅರ್ಹರಿಗೆ ವೈದ್ಯಕೀಯ ಚಿಕಿತ್ಸೆ ಮತ್ತಿತರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆಯ ಆರಂಭಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಎಂವೈಎಫ್ ಸ್ಥಾಪಕ ಅಧ್ಯಕ್ಷರಾಗಿ ಫಹೀಂ ಆಖ್ತರ್, ಪ್ರಧಾನ ಕಾರ್ಯದರ್ಶಿಯಾಗಿ ಶಾನವಾಝ್, ಜೊತೆ ಕಾರ್ಯದರ್ಶಿ ಯಾಗಿ ಶಿಹಾಬ್ ಬಂದರ್, ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಕುದ್ರೋಳಿ, ಅಶ್ಫಾಕ್ ಇಬ್ರಾಹೀಂ, ಸಲಹೆಗಾರರಾಗಿ ಮುಶ್ತಾಖ್, ಸಿರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಹಮ್ಮದ್ ಫಝಾಬ್, ಮುನೀರ್ ಕಂದಕ್, ತನ್‌ಝೀಲ್ ಐಮಾನ್, ಮುಹಮ್ಮದ್ ಅಶ್ರಫ್, ಆರಿಫ್, ಮನ್‌ಝರ್, ಝಿಯಾವುಲ್ ರಹ್ಮಾನ್, ಅಬ್ದುಲ್ ನಿಹಾನ್, ಮುಹಮ್ಮದ್ ತೌಫೀಖ್ ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News