ಗುರುಪುರ ಎಂಜಿಎಂ ತಾಲೀಮ್ ಸ್ಪೋರ್ಟ್ಸ್ ಸಂಸ್ಥೆಯಿಂದ ಸ್ಪೀಕರ್‌ ಯುಟಿ ಖಾದರ್‌ಗೆ ಸನ್ಮಾನ

Update: 2023-08-05 16:36 GMT

ಗುರುಪುರ : ಕರಾಟೆ, ತಾಲೀಮಿನಂತಹ ಕಲೆಗಳು ವ್ಯಕ್ತಿಯಲ್ಲಿ ಧೈರ್ಯ ಹಾಗೂ ತಾಳ್ಮೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಸಮಾಜದಲ್ಲಿ ಸಂಘಟಿತರಾಗಿ ಇದರಿಂದ ಬದುಕುವ ಗುಣ ಬೆಳೆಯುತ್ತದೆ. ಇಂದಿನ ಸಮಾಜದಲ್ಲಿ ಸರ್ವರಿಗೂ ಗೌರವ ನೀಡಿ ಸೌಹಾರ್ದ ಮತ್ತು ಪ್ರೀತಿಯಿಂದ ಬದುಕುವ ಕಲೆ ಮೈಗೂಡಿಸಿಕೊಳ್ಳಬೇಕು. ಒಗ್ಗಟ್ಟು ಇದ್ದಲ್ಲಿ ಅಭಿವೃದ್ಧಿಗೆ ಯಾವುದೇ ತಡೆಯಾಗದು ಎಂದು ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಶನಿವಾರ ಎಂಜಿಎಂ ತಾಲೀಮ್ ಸ್ಪೋರ್ಟ್ಸ್(ರಿ) ಸಂಸ್ಥೆಯು ಗುರುಪುರ ಮತ್ತು ಅಡ್ಡೂರು ಸಮಸ್ತ ನಾಗರಿಕರ ಪರವಾಗಿ ಆಯೋಜಿಸಿದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ಎಂ. ಎಚ್. ಮೊಹಿದ್ದೀನ್, ಹಿರಿಯ ನಾಗರಿಕರಾದ ಅಬ್ದುಲ್ ಕರೀಂ ಅಡ್ಡೂರು, ಹೋಸ್ಟ್ ದೋಸ್ತ್ ಶಾಹಿಲ್ ಝಾಹಿರ್ ಅವರನ್ನು ಸನ್ಮಾನಿಸಲಾಯಿತು.

ಕವಿ ಮುಹಮ್ಮದ್ ಬಡ್ಡೂರು ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು ಸ್ವಾಗತಿಸಿದರು. ತಾಲೀಮ್ ಸಂಸ್ಥೆಯ ತಾಲೀಮ್ ಮಾಸ್ಟರ್ ಎಂ.ಜಿ. ಶಾಹುಲ್ ಹಮೀದ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಮೆಲ್ವಿನ್ ಡಿ’ಸೋಜ ನೀರುಮಾರ್ಗ, ಅಬ್ದುಲ್ ಮಜೀದ್ ಸೂರಲ್ಪಾಡಿ, ಅಬ್ದುಲ್ ಅಝೀಝ್ ಬಾಷಾ, ಶಾಫಿ ಬಬ್ಬುಕಟ್ಟೆ, ಯು.ಪಿ. ಇಬ್ರಾಹಿಂ, ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ, ಮೆಲ್ವಿನ್ ಗುರುಪುರ, ಸಾಹುಲ್ ಹಮೀದ್ ಮೆಟ್ರೋ, ಅಬ್ದುಲ್ ಲತೀಫ್ ಗುರುಪುರ, ಶೇಖ್ ಮುಹಮ್ಮದ್ ಕೈಕಂಬ, ಎಂ.ಡಿ. ನವಾಝ್ ಸೂರಲ್ಪಾಡಿ, ರಫೀಕ್ ಬಜ್ಪೆ, ಮೈಯ್ಯದ್ದಿ ಕುಕ್ಕಟ್ಟೆ, ಅಬೂಬಕ್ಕರ್ ಸೂರಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಎಂ.ಎ. ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಮತ್ತು ಶಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News