2 ಕೋಟಿ ರೂ. ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಕಾಮಗಾರಿಗೆ ಶೀಘ್ರ ಚಾಲನೆ : ದಿನೇಶ್ ಗುಂಡೂ ರಾವ್
ಮಂಗಳೂರು, ಆ.15: ನಗರದ ನೆಹರೂ ಮೈದಾನಕ್ಕೆ ತಾಗಿಗೊಂಡಿರುವ ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಆಟಗಾರರಿಗೆ ಅನುಕೂಲವಾಗುವಂತೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಟ್ರೋ ಟರ್ಫ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನಿಡಲಾಗಿವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ 26ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಸಮಾರೋಪ ಸಮಾರಂಭದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.
ಆಸ್ಟ್ರೋ ಟರ್ಫ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಸ್ಥಳೀಯ ಕ್ರೀಡಾ ಪ್ರತಿಭೆಗಳ ಬಳಕೆಗೆ ಈ ಗ್ರೌಂಡ್ ಬೇಗನೆ ಲಭ್ಯವಾಗುಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಶುಭ ಹಾರೈಸಿದರು. ಪ್ರಶಸ್ತಿ ವಿಜೇತ ತಂಡಗಳಿಗೆ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ರಾಷ್ಟ್ರೀಯ ಆಯೋಗದ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ ಮತ್ತು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಬಹುಮಾನ ವಿತರಿಸಿದರು.
ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಅಧ್ಯಕ್ಷತೆ ವಹಿಸಿದ್ದರು.
ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಯು.ಕೆ. ಮೋನು ಕಣಚೂರು , ಮನಪಾ ಸದಸ್ಯ ಎಸಿ ವಿನಯ್‌ರಾಜ್ ,ಇಂಡಿಯನ್ ಡಿಝೈನ್ ಸ್ಕೂಲ್ ಅಧ್ಯಕ್ಷ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಉದ್ಯಮಿಗಳಾದ ಅಬ್ದುಲ್ಲ ಮೋನು ಕತಾರ್, ಮೋಹನ್ ಬೆಂಗ್ರೆ, ಮನ್ಸೂರ್ ಅಹಮದ್, ಖಾಲಿದ್, ಎ.ಕೆ ನಾಝಿಮ್, ,ಇಬ್ರಾಹೀಂ ಗಡಿಯಾರ್ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಹುಸೇನ್ ಬೋಳಾರ ಸ್ವಾಗತಿಸಿದರು. ಸದಸ್ಯ ಸುಜೀತ್ ವಂದಿಸಿದರು.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಎಲ್ಲಾ ಪಧಾದಿಕಾರಿಗಳು ಹಾಗೂ ಟೂರ್ನಮೆಂಟ್ ಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಶಿಯಾಝ್ ಕಾರ್ಯಕ್ರಮ ನಿರೂಪಿದರು.
ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ತೆರೆ
ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ನೆಹರೂ ಮೈದಾನ ಫುಟ್ಬಾಲ್ ಗ್ರೌಂಡ್ ನಲ್ಲಿ ಕಳೆದ 23 ದಿನಗಳಿಂದ ನಡೆಯುತ್ತಿದ್ದ 26ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ ಹೈಸ್ಕೂಲ್,ಪಿ.ಯು.ಕಾಲೇಜು ಹಾಗೂ ಡಿಗ್ರಿ ಕಾಲೇಜು ಫೈನಲ್ ಪಂದ್ಯಾಟಗಳು ನಡೆದು ಪಂದ್ಯಾವಳಿಸ್ಕೂಲ್ ಮುಕ್ತಾಯಗೊಂಡಿತು.
ಹೈಸ್ಕೂಲ್ ವಿಭಾಗದ ಫೈನಲ್‌ನಲ್ಲಿ ದೇರಳಕಟ್ಟೆಯ ಕಣಚೂರ್ ಪಬ್ಲಿಕ್ ಸ್ಕೂಲ್ ತಂಡವು ಮಣಿಪಾಲ ಸ್ಕೂಲ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು. ಯೆನಪೋಯ ಪಿ.ಯು.ಕಾಲೇಜು ತಂಡವು ಟಿಪ್ಪು ಸುಲ್ತಾನ್ ಪಿ.ಯು.ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.
ಯೆನಪೋಯ ಕಾಲೇಜು ತನ್ನದೇ ‘ಬಿ’ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.