ಮಂಗಳೂರು: MEIF ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರ

Update: 2023-11-17 13:23 GMT

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ MEIF ವಿದ್ಯಾ ಸಂಸ್ಥೆಗಳ ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ಬಗ್ಗೆ ಮೂರು ದಿವಸಗಳ ಕಾರ್ಯಾಗಾರವು ಪ್ರೆಸಿಡೆನ್ಸಿ ಸ್ಕೂಲ್ ವಾಮಂಜೂರಿನಲ್ಲಿ ನ. 16 ರಂದು ಉದ್ಘಾಟನೆಗೊಂಡಿತು.

ರಾಜೀವ್ ಗಾಂಧಿ ಯೂನಿವರ್ಸಿಟಿ ಬೆಂಗಳೂರು ಇದರ ಸಿಂಡಿಕೇಟ್ ಸದಸ್ಯರಾದ ಡಾ. ಯು.ಟಿ. ಇಫ್ತಿಕಾರ್ ಕಾರ್ಯಾಗಾರ ಉದ್ಘಾಟಿಸಿದರು.

ಇಂಗ್ಲೀಷ್ ಭಾಷೆಯಲ್ಲಿ ವಿದ್ಯಾರ್ಥಿಗಳು ಪ್ರಾವೀಣ್ಯತೆ ಹೊಂದಲು ಭಾಷಾ ಶಿಕ್ಷಕರಿಗೆ ಇಂತಹಾ ತರಬೇತಿಯನ್ನು ಸಂಘಟಿಸಿರುವುದು ಸ್ವಾಗತಾರ್ಹವಾಗಿದೆ. ಇದನ್ನು ನಿರಂತರವಾಗಿ ಜರುಗಿಸಿ ಶಿಕ್ಷಕರಿಗೆ ಪುನಶ್ಚೇತನ ನೀಡುವುದು ಅತೀ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಯೂನಿವರ್ಸಿಟಿಯ ಎಲೆಕ್ಟ್ರಾನಿಕ್ಸ್ ವಿಭಾಗದ ಚೇರ್ಮನ್ ಡಾ. ಎ ಎಂ ಖಾನ್, ಪ್ರೆಸಿಡೆನ್ಸಿ ಸ್ಕೂಲ್ ಬೆಂಗಳೂರು ಮತ್ತು ಮಂಗಳೂರಿನ ಪ್ರಿನ್ಸಿಪಾಲ್ ಮತ್ತು ಡೈರೆಕ್ಟರ್ ಭುವನೇಶ್ವರಿ ಭಾಗವಹಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ MEIF ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, 'MEIF ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು (Quality education) ಉತ್ತಮಗೊಳಿಸುವ ಯೋಜನೆ ಇದಾಗಿರುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಇಂತಹ ಕಾರ್ಯಕ್ರಮಗಳನ್ನು MEIF ಹಮ್ಮಿಕೊಂಡಿದೆ' ಎಂದು ತಿಳಿಸಿದರು. ಸಿಂಡಿಕೇಟ್ ಸದಸ್ಯರಾಗಿ ಪುನರಾಯ್ಕೆಗೊಂಡ ಡಾ. ಯು.ಟಿ. ಇಫ್ತಿಕಾರ್ ಅವರನ್ನು MEIF ವತಿಯಿಂದ ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಪರಿಣಿತ ತಂಡದವರಾದ ರಾಜೇಶ್ವರಿ, ಲಿಪಿಕಾ, ಜಯಶ್ರೀ ಕಾರ್ಯಗಾರ ನಡೆಸಿಕೊಟ್ಟರು.

ಮಂಗಳೂರು ಪ್ರೆಸಿಡೆನ್ಸಿ ಸ್ಕೂಲ್ ಪ್ರಾಂಶುಪಾಲರಾದ ಶೈಲಾ ಸಾಲ್ದಾನ ಸ್ವಾಗತಿಸಿದರು. ಸೀನಿಯರ್ ಕಾರ್ಡಿನೇಟರ್ ಆಯಿಷಾ ಇಲ್ಹಾನ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಪ್ರೆಸಿಡೆನ್ಸಿ ಸ್ಕೂಲ್ ಮಂಗಳೂರು ಇದರ ಕಾರ್ಡಿನೇಟರ್ ಜಾವಿದ್, MEIF ಉಪಾಧ್ಯಕ್ಷರಾದ ಮುಸ್ತಫಾ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್, ಕಾರ್ಯದರ್ಶಿ ಅನ್ವರ್ ಗೂಡಿನಬಳಿ, ಶಾರಿಕ್, ಕೋಶಾಧಿಕಾರಿ ನಿಸಾರ್, ಕನ್ವೀನರ್ ಪರ್ವೀಝ್ ಅಲಿ, ಸದಸ್ಯರಾದ ರಹಮತ್ತುಲ್ಲಾ ಬುರೂಜ್, ಅಬ್ದುಲ್ ರಝಾಕ್ ಗೊಲ್ತಮಜಲು, ಶಂಸುದ್ದೀನ್, ಬಿ ಎ ಇಕ್ಬಾಲ್, ಶಹಾಂ ಅಲ್ ಫುರ್ಖಾನ್ ಉಪಸ್ಥಿತರಿದ್ದರು.

ಉಭಯ ಜಿಲ್ಲೆಗಳ 56 ಇಂಗ್ಲಿಷ್ ಭಾಷಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುತ್ತಿದ್ದಾರೆ, ಮೊದಲನೇ ಹಂತದಲ್ಲಿ ಮೂರು ದಿವಸಗಳ ಈ ಕಾರ್ಯಕ್ರಮವು ಈಗ ನಡೆಯುತ್ತಿದ್ದು, ಎರಡನೇ ಹಂತದ ಎರಡು ದಿವಸಗಳ ಕಾರ್ಯಗಾರ ಮುಂದಿನ ತಿಂಗಳಲ್ಲಿ ನಡೆಸಲಾಗುವುದು.

ಕಾರ್ಯಗಾರದ ಸಂಪೂರ್ಣ ಪ್ರಾಯೋಜಕತ್ವವನ್ನು ಪ್ರೆಸಿಡೆನ್ಸಿ ಯುನಿವರ್ಸಿಟಿ ಬೆಂಗಳೂರು ನಿರ್ವಹಿಸಿರುವರು.


 








 


 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News