ಅ.20 ರಂದು ಯೆನೆಪೋಯ ಎನ್.ಎಸ್.ಎಸ್ ವತಿಯಿಂದ ರಾಜ್ಯಮಟ್ಟದ ಜೀವನ ಕೌಶಲ್ಯ ಕಾರ್ಯಾಗಾರ

Update: 2024-10-19 07:30 GMT

ಮಂಗಳೂರು: ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಅ್ಯಂಡ್ ಮ್ಯಾನೇಜ್ಮೆಂಟ್ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ 10 ಇದರ ವತಿಯಿಂದ “ ವಾಲ್ಯುಂಟಿಯರ್ಸ್ ಟು ಲೀಡರ್ : ಲೈಫ್ ಸ್ಕಿಲ್ ಫಾರ್ ಸಕ್ಸಸ್ “ ಇದರ ವಿಷಯದ ಬಗ್ಗೆ ಅಕ್ಟೊಬರ್ 20 ರಂದು ಕೂಳೂರಿನ ಯೆನೆಪೋಯ ವೈ.ಎಂ.ಕೆ ಆಡಿಟೋರಿಯಂನಲ್ಲಿ ನಡಿಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಡಾ ಉಮ್ಮರ್ ಬೀಜದಕಟ್ಟೆ ಉಪಾದ್ಯಕ್ಷರು ಮಾನವ ಸಂಪನ್ಮೂಲ ವಿಭಾಗ ಫಾರ್ಮೆಡ್ ಗ್ರೂಪ್ ಬೆಂಗಳೂರು ಮತ್ತು ವಿಕ್ರಮ್ ಸಾಗರ್ ಸಕ್ಸೇನಾ ಫಾರ್ಮೆಡ್ ಗ್ರೂಪ್ ಬೆಂಗಳೂರು ಬಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜ್ ಪ್ರಾಂಶುಪಾಲ ಡಾ. ಅರುಣ್ ಭಾಗವತ್ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಡಾ ಅಶ್ವಿನಿ ಶೆಟ್ಟಿ ಸಂಯೋಜಕರು ರಾಷ್ಟ್ರೀಯ ಸೇವಾ ಯೋಜನಾ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಡಾ ಶರೀನಾ ಪಿ, ಡಾ ಜೀವನ್ ಕುಮಾರ್ , ನಾರಯಣ್ ಕುಮಾರ್ ಉಪಸ್ಥಿತರುವರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಶೇಷಪ್ಪ ಕೆ ಸಂಯೋಜಕರು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಯೆನೆಪೋಯ ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿ ಅಬ್ದುಲ್ ರಶೀದ್ ಕೆ.ಎಂ. ಹಾಗೂ ವಿದ್ಯಾರ್ಥಿ ಸಂಯೋಜಕರಾದ ಝುಲ್ಫಿಕರ್ ಅಲಿ ಮತ್ತು ಸಿಲ್ಮಿ ಮೆಹಬೂಬ್ ನಡಸಿಕೊಡಲಿದ್ದಾರೆ ಎಂದು ಆಯೋಜಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News