ಎಸ್ ವೈ ಎಸ್ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ರಕ್ಷಾ ಸಂಗಮ

Update: 2024-08-16 06:34 GMT

ಉಳ್ಳಾಲ: ಸ್ವಾತಂತ್ರ್ಯ ದೇಶವನ್ನು ಬಹಳಷ್ಟು ಬಲಿಷ್ಠಗೊಳಿಸಿದೆ. ದೇಶದ ಆಡಳಿತದಲ್ಲಿ ಆಗುವ ಬದಲಾವಣೆ, ಯೋಜನೆ, ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಚಾರಗಳ ಚರ್ಚೆ ನಡೆಯುತ್ತಿರುವುದು, ಅಭಿವೃದ್ಧಿಯಲ್ಲಿ ಬದಲಾವಣೆ ಆಗುತ್ತಿರುವುದು ಸ್ವಾತಂತ್ರ್ಯ ಸಿಕ್ಕಿದ ಕಾರಣದಿಂದ ಆಗಿದೆ. ದೇಶದ ರಕ್ಷಣೆ ನಮ್ಮಿಂದ ಆಗಬೇಕು. ಅಭಿವೃದ್ದಿ ಕಡೆ ನಮ್ಮ ಒಲವು ಬೇಕು ಎಂದು ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು

ಅವರು ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆದ ಎಸ್ ವೈ ಎಸ್ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕ ಬೆಟ್ಟು ಮಾತನಾಡಿ, ಜಾತ್ಯತೀತತೆ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಪೂರ್ವ ದಲ್ಲೇ ಈ ಬಗ್ಗೆ ಕಲ್ಪನೆ ಇಡಲಾಗಿತ್ತು ಎಂದು ಹೇಳಿದರು.

ಚರ್ಚ್ ಧರ್ಮಗುರು ಫಾದರ್ ವಿಕ್ಟರ್ ಡಿಮೆಲ್ಲೋ ಮಾತನಾಡಿ, ಸ್ವಾತಂತ್ರ್ಯ ನಮ್ಮ ಹಬ್ಬ. ಈ ದಿನ ದೇಶಕ್ಕಾಗಿ ಮನೆ ಮಠ ತೊರೆದು ಚಳವಳಿ ನಡೆಸಿದ ನಮ್ಮ ಪೂರ್ವಜರನ್ನು ನೆನಪಿಸುತ್ತದೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ಅಹಿಂಸಾವನ್ನು ಪ್ರಧಾನವಾಗಿ ಇಟ್ಟ ದೇಶ ನಮ್ಮದಾಗಿದೆ ಎಂದು ಹೇಳಿದರು.

ಅಡ್ವೊಕೇಟ್ ಹನೀಫ್ ಹುದವಿ ಕೇರಳ ಸಂದೇಶ ಭಾಷಣ ಮಾಡಿದರು. ಜುಮಾ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನ್ ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಸಯ್ಯದ್ ಅಮೀರ್ ತಂಙಳ್,  ಬೆಳ್ಮ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಂ.ಸತ್ತಾರ್, ಸದಸ್ಯ ಇಕ್ಬಾಲ್ ಎಚ್.ಆರ್, ಮದ್ರಸ ಮೆನೇಜ್ ಮೆಂಟ್ ಜಿಲ್ಲಾ ಅಧ್ಯಕ್ಷ ಎಂ.ಎಚ್. ಹಾಜಿ, ದೇರಳಕಟ್ಟೆ ವಲಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಹಕೀಂ ಪರ್ತಿಪ್ಪಾಡಿ, ಅಬ್ಬು ಹಾಜಿ ಕಿನ್ಯ, ಸಯ್ಯದ್ ಅಲಿ ದೇರಳಕಟ್ಟೆ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎ.ಎಚ್. ತುಂಬೆ, ಅಬೂಬಕ್ಕರ್ ಸ್ವಾಗತ್, ಅಬೂಸಾಲಿ ಹಾಜಿ ಕಿನ್ಯ, ಇಬ್ರಾಹಿಂ ಕೊಣಾಜೆ, ಅಶ್ರಫ್ ಮಂಗಳನಗರ, ಸಿ.ಎಂ.ಫಾರೂಕ್, ಅಬ್ದುಲ್ ರಹಿಮಾನ್ ಫೈಝಿ, ಮುಹಮ್ಮದ್ ಮುಂಡೋಲ, ಹಿದಾಯತುಲ್ಲ ಉಚ್ಚಿಲ, ಸಿ.ಎ.ಶರೀಫ್ ಪಟ್ಟೋರಿ, ಅಬ್ದುಲ್ ಲತೀಫ್ ದಾರಿಮಿ, ಎಸ್.ಮಹಮ್ಮದ್ ಹನೀಫ್ ಉಚ್ಚಿಲ, ಅಬ್ದುಲ್ಲಾ ಹಾಜಿ ಎಂ.ಎ.ಬೆಳ್ಮ, ಅಬ್ದುಲ್ ಸಲಾಂ ಹಾಜಿ ಉಚ್ಚಿಲ, ಅಬ್ದುಲ್ ರಹಿಮಾನ್ ದಾರಿಮಿ ದೇರಳಕಟ್ಟೆ, ಮೊಹಮ್ಮದ್ ಹನೀಫ್ ಹಾಜಿ ಮಂಗಳೂರು, ಅದ್ದು ಹಾಜಿ ಮಂಗಳೂರು, ಮೊಹಮ್ಮದ್ ಪನೀರ್, ಕತ್ತರ್ ಇಬ್ರಾಹಿಂ ಹಾಜಿ, ದೇರಳಕಟ್ಟೆ ಮಸೀದಿ ಅಧ್ಯಕ್ಷ ಅಹ್ಮದ್ ಸೇಟ್, ಅಬೂಬಕ್ಕರ್ ಮೂಲಾರ್, ಶಾಫಿ ದಾರಿಮಿ, ಟಿ.ಎಂ.ಹನೀಫ್ ನಿಝಾಮಿ ಮತ್ತಿತರರು ಉಪಸ್ಥಿತರಿದ್ದರು.

ನಝೀರ್ ಉಳ್ಳಾಲ ಸ್ವಾಗತಿಸಿದರು.ಮುಸ್ತಫಾ ಫೈಝಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News