ಆ.13ರಂದು ‘ದಿ ಅಲ್ಟಿಮೇಟ್ ಇಂಡಿಯಾ’ ರಸಪ್ರಶ್ನೆ ಸ್ಪರ್ಧೆ

Update: 2023-08-05 13:17 GMT

ಮಂಗಳೂರು: ಮಂಗಳೂರು ಕ್ವಿಝಿಂಗ್ ಫೌಂಡೇಶನ್‌ನಿಂದ ‘ ದಿ ಅಲ್ಟಿಮೇಟ್ ಇಂಡಿಯಾ’ ರಸಪ್ರಶ್ನೆ ಸ್ಪರ್ಧೆ ಆ.13ರಂದು ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಲಿದೆ.

ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿ ಸಲಾಗುವುದು ಎಂದು ಮಂಗಳೂರು ಕ್ವಿಝಿಂಗ್ ಫೌಂಡೇಶನ್‌ನ ಅಧ್ಯಕ್ಷ ಡಾ.ಅಣ್ಣಪ್ಪ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಸ ಪ್ರಶ್ನೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ರಸಪ್ರಶ್ನೆಯು ಭಾರತ ಕೇಂದ್ರೀಕೃತವಾಗಿದ್ದು, ಶಾಲಾ ಮಕ್ಕಳ ವಿಭಾಗದಲ್ಲಿ 10ನೇ ತರಗತಿ ತನಕದ ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿರುತ್ತಾರೆ. ಇದು ಬೆಳಗ್ಗೆ 10 ಗಂಟೆಗೆ ಆರಂಭವಾಗಿದೆ. ಇನ್ನೊಂದು ಮುಕ್ತ ವಿಭಾಗದ ರಸಪ್ರಶ್ನೆ ಸ್ಪರ್ಧೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಪ್ರತಿ ತಂಡವು ಇಬ್ಬರನ್ನು ಒಳಗೊಂಡಿರಬೇಕು. ರಸಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ನಡೆಸಲಾಗುವುದು, ಲಿಖಿತ ಪ್ರಾಥಮಿಕ ಸುತ್ತು ಇರುತ್ತದೆ, ಅಗ್ರ 6 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. 

ಮುಕ್ತ ವಿಭಾಗದ 3 ಅಗ್ರ ತಂಡಗಳಿಗೆ ಒಟ್ಟು 50,000 ರೂ. ನಗದು ಬಹುಮಾನ (ಪ್ರಥಮ 25, 000 ರೂ, ದ್ವಿತೀಯ 15,000 ರೂ. ಮತ್ತು ತೃತೀಯಾ 10, 000 ರೂ.) ನೀಡಲಾಗುವುದು.

ಶಾಲಾ ರಸಪ್ರಶ್ನೆ, ವಿಜೇತರಿಗೆ 30,000 ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು ಎಂದು ಡಾ.ಅಣ್ಣಪ್ಪ ಕಾಮತ್ ಮಾಹಿತಿ ನೀಡಿದರು.

ಭಾಗವಹಿಸುವ ತಂಡಗಳು ತಂಡಗಳು ಮೊಬೈಲ್ ನಂಬ್ರ 9902096914, 7019944161ಈ ಸಂಪರ್ಕಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕ್ವಿಝಿಂಗ್ ಫೌಂಡೇಶನ್‌ನ ಉಪಾಧ್ಯಕ್ಷ ಡಾ.ಅನಿಲ್ ಶೆಟ್ಟಿ, ಕಾರ್ಯದರ್ಶಿ ಡಾ.ವಿಶ್ವಾಸ್ ಕೆ.ಪೈ, ಜೊತೆ ಕಾರ್ಯದರ್ಶಿ ವಿಕಾಸ್ ಜೈನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News