ಸೌತ್ ಕೊರಿಯಾ ವಿಶ್ವ ಜಾಂಬೂರಿಗೆ ಸುಳ್ಯದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

Update: 2023-07-20 17:41 GMT

ಮನುಜ ನೇಹಿಗ - ಅಶ್ವಿನಿ ಸರವು

ಸುಳ್ಯ, ಜು.20: ಸೌತ್ ಕೊರಿಯಾದಲ್ಲಿ ಆ.2ರಿಂದ 12ರವರೆಗೆ ನಡೆಯುವ 25ನೇ ಅಂತರ್‌ ರಾಷ್ಟ್ರೀಯ ಸ್ಕೌಟ್-ಗೈಡ್ ಜಾಂಬೂರಿಯಲ್ಲಿ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿ ಸರವು ಭಾಗವಹಿಸಲಿದ್ದಾರೆ.

ಸುಳ್ಯ ರಂಗಮನೆಯ ಮನುಜ ನೇಹಿಗ ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ. ಎಳವೆಯಿಂದಲೇ ಯಕ್ಷಗಾನ, ರಂಗಭೂಮಿ, ಸಂಗೀತ, ನೃತ್ಯ, ಇಂದ್ರಜಾಲ, ಮಣಿಪುರಿ ಸ್ಟಿಕ್ ಡ್ಯಾನ್ಸ್ ಮುಂತಾದ ಬಹುಮುಖ ಪ್ರತಿಭೆಯನ್ನು ಹೊಂದಿರುವ ಅವರು, ತನ್ನ ‘ದಶಕಲಾ ಕೌಶಲ’ ಕಾರ್ಯಕ್ರಮದ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಮೌಲ್ಯಾ ದಂಪತಿಯ ಪುತ್ರ.

ಸುಳ್ಯ ರೋಟರಿ ಸಂಯುಕ್ತ ಪಪೂ ಕಾಲೇಜು ಮಿತ್ತಡ್ಕದ ವಿದ್ಯಾರ್ಥಿನಿ ಅಶ್ವಿನಿ ಎಸ್. ಯಕ್ಷಗಾನ, ಕ್ರೀಡೆ, ಚಿತ್ರಕಲೆ, ಯೋಗ ಮುಂತಾದ ಕಲೆಗಳಲ್ಲಿ ಪಳಗಿದ ಬಹುಮುಖ ಪ್ರತಿಭೆ. ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನೂ ಪಡೆದಿದ್ದಾರೆ. 2022-23 ನೇ ಸಾಲಿನಲ್ಲಿ ಸ್ಕೌಟ್-ಗೈಡ್ಸ್‌ನ ಗೈಡ್ಸ್ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಪಡೆದ ಅಶ್ವಿನಿ, ಸುಳ್ಯದ ನ್ಯಾಯವಾದಿ ಈಶ್ವರ ಭಟ್ ಸರವು ಮತ್ತು ಅಜ್ಜಾವರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ವಿದ್ಯಾ ಶಂಕರಿ ಎಸ್. ದಂಪತಿಯ ಪುತ್ರಿಯಾಗಿದ್ದಾರೆ.

ದ.ಕ.ಜಿಲ್ಲೆಯಿಂದ ಒಟ್ಟು 48 ಸ್ಕೌಟ್ ಗೈಡ್ಸ್‌ಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಆ ಪೈಕಿ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿ ಅಂ.ರಾಷ್ಟ್ರೀಯ ಜಾಂಬೂರಿಯ ವೇದಿಕೆಯಲ್ಲಿ ಭಾರತೀಯ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News