ಯುನಿವೆಫ್ ಮಂಗಳೂರು ವತಿಯಿಂದ ಮಾದಕ ವ್ಯಸನ ಜಾಗೃತಿ ರ್‍ಯಾಲಿ

Update: 2024-08-23 06:35 GMT


ಮಂಗಳೂರು: ಯುನಿವೆಫ್ ಕರ್ನಾಟಕ ಇದರ  ಮಂಗಳೂರು ಶಾಖೆಯ ವತಿಯಿಂದ ಎಸ್ ಸಿ ಎಸ್ ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸಸ್ ಮತ್ತು ದಕ್ಷಿಣ ವಿಭಾಗ ಪೋಲೀಸ್ ಠಾಣೆ ಪಾಂಡೇಶ್ವರ ಇವರ ಸಹಯೋಗದೊಂದಿಗೆ ಮಾದಕ ವ್ಯಸನ ಜಾಗೃತಿ ರ್‍ಯಾಲಿಯನ್ನು (Drug Abuse Awareness Rally) ಆಗಸ್ಟ್ 24ರ ಶನಿವಾರ ಆಯೋಜಿಸಲಾಗಿದೆ.

ಅಪರಾಹ್ನ 3 ಗಂಟೆಗೆ ಫಳ್ನೀರ್ ನ ಇಂದಿರಾ ಆಸ್ಪತ್ರೆ ಬಳಿ ಇರುವ ಲುಲು ಸೆಂಟರ್ ನಲ್ಲಿ ಈ ರ್‍ಯಾಲಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ವಿಭಾಗ ಪೋಲೀಸ್ ಠಾಣೆ ಯ ನಿರೀಕ್ಷಕ ಗುರುರಾಜ್ ಇವರು ಧ್ವಜ ಹಾರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ ಫಳ್ನೀರ್ ವಾರ್ಡ್ ನ ಕಾರ್ಪೋರೇಟರ್ ಶ್ರೀ ನವೀನ್ ಆರ್ ಡಿ ಸೋಝ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ ಬಳಿಕ ರ್‍ಯಾಲಿಯು ಲುಲು ಸೆಂಟರ್ ನಿಂದ ಸಿಗ್ನಲ್ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧದಲ್ಲಿ ಸಮಾರೋಪಗೊಳ್ಳುವುದು.

ಸಮಾರೋಪದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಲಾಗುವುದು. ಆಮೇಲೆ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಎಸ್ ಸಿ ಎಸ್ ನರ್ಸಿಂಗ್ ಕಾಲೇಜಿನ ಅಸಿಸ್ಟೆಂಟ್ ಲೆಕ್ಚರರ್ ಕುಮಾರಿ ಅಶ್ವಿತ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಸಂಚಾಲಕ ಯು. ಕೆ. ಖಾಲಿದ್ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News