ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ

Update: 2024-09-01 16:30 GMT

ಮಂಗಳೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ನೇತೃತ್ವದಲ್ಲಿ ೫೩ ಬಜಾಲ್ ವಾರ್ಡ್‌ನ ಬಜಾಲ್ ನಂತೂರ್‌ನಲ್ಲಿ ರವಿವಾರ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಯಿತು.

ಯುವಕರು ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ನಾಯಕರಾಗುವ ಅವಕಾಶ ಪಡೆಯಬಹುದು. ಪಕ್ಷ ಬಲಪಡಿಸಲು ಯುವಕರು ಕಾರ್ಯೋನ್ಮುಖರಾಗಬೇಕೆಂದು ಹೊಸ ಯುವ ಸದಸ್ಯರಿಗೆ ಈ ಸಂದರ್ಭದಲ್ಲಿ ಮನವರಿಕೆ ಮಾಡಲಾಯಿತು.

ಯುವ ಕಾಂಗ್ರೆಸ್ ಧುರೀಣರಾದ ಯು ಪಿ ವಾಸಿಂ, ಅಬ್ದುಲ್ ಜಬ್ಬಾರ್, ಜಮಾಲುದ್ದಿನ್, ಯು ಪಿ ಇಮ್ರಾನ್, ಸೌಕಾತ್ ಇಬ್ರಾಹೀಂ, ಫಯಾಝ್, ನಿಝಾಮ್, ಶಾಕಿರ್, ಸಹಿಫ್, ಶರೀಫ್, ಮೋನು, ಮುನೀರ್ ಮೊದಲಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News