ಅಮೆರಿಕ |ಕೋವಿಡ್ ನಿಧಿಯಿಂದ 200 ಶತಕೋಟಿ ಡಾಲರ್ ವಂಚನೆ: ವರದಿ

Update: 2023-06-28 18:04 GMT

Photo : NDTV.com 

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್-19 ಸಾಂಕ್ರಾಮಿಕದ ಪರಿಹಾರ ಅಭಿಯಾನಗಳಿಗೆ ನಿಗದಿಗೊಳಿಸಲಾದ ನಿಧಿಯಿಂದ 200 ಶತಕೋಟಿ ಡಾಲರ್‍ಗೂ ಅಧಿಕ ಹಣವನ್ನು ಕದಿಯಲಾಗಿದೆ ಎಂದು ಅಮೆರಿಕ ಸರಕಾರ ನೇಮಿಸಿರುವ ಕಣ್ಗಾವಲು ಸಂಸ್ಥೆ ವರದಿ ಮಾಡಿದೆ.

ಸಾಂಕ್ರಾಮಿಕದ ಹೊಡೆತಕ್ಕೆ ತತ್ತರಿಸಿದ್ದ ಸಣ್ಣ ಉದ್ಯಮಗಳು ಚೇತರಿಸಿಕೊಳ್ಳಲು ನೆರವಾಗುವ ಉದ್ದೇಶದ, ಸರಕಾರದ ಅನುದಾನದಿಂದ ರೂಪಿಸಿದ ನಿಧಿಯ ಬಳಕೆಯ ಬಗ್ಗೆ ಕಣ್ಗಾವಲು ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಸಣ್ಣ ಉದ್ಯಮಗಳ ಆಡಳಿತ(ಎಸ್‍ಬಿಎ) ವಿಭಾಗದ ಮಹಾನಿರೀಕ್ಷಕರು ಮಂಗಳವಾರ ವರದಿ ಮಾಡಿದ್ದಾರೆ.

ಸಾಂಕ್ರಾಮಿಕದ ಸಂದರ್ಭ ಸಣ್ಣ ಉದ್ಯಮಗಳ ನೆರವಿಗೆ ರೂಪಿಸಲಾದ `ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ(ಪಿಪಿಪಿ)' ಮತ್ತು `ಇಕನಾಮಿಕ್ ಇಂಜುರಿ ಡಿಸಾಸ್ಟರ್ ಲೋನ್ಸ್(ಇಐಡಿಲ್)' ಎಂಬ ಎರಡು ಯೋಜನೆಗಳ ಬಗ್ಗೆ ತನಿಖೆಯಲ್ಲಿ ಆದ್ಯತೆ ನೀಡಲಾಗಿದೆ. ಇಐಡಿಎಲ್‍ನ ಯೋಜನೆಯಲ್ಲಿ ಕನಿಷ್ಟ 17%ದಷ್ಟು ಮೊತ್ತ ವಂಚಕರ ಪಾಲಾಗಿದೆ. ಅಮೆರಿಕ ಸರಕಾರ ಇಐಡಿಎಲ್‍ಗೆ 136 ಶತಕೋಟಿಗೂ ಅಧಿಕ ಹಣ ಮತ್ತು ಪಿಪಿಪಿ ಯೋಜನೆಗೆ 64 ಶತಕೋಟಿ ಡಾಲರ್ ಅನುದಾನ ಮೀಸಲಿರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News