ಅ.1ರಿಂದ ಆನ್‌ಲೈನ್ ಗೇಮಿಂಗ್ ಮೇಲೆ ಶೇ.28 ಜಿಎಸ್‌ಟಿ
Update: 2023-09-28 17:17 GMT
ಹೊಸದಿಲ್ಲಿ: ಅ.1ರಿಂದ ಆನ್‌ಲೈನ್ ಗೇಮಿಂಗ್‌ಗೆ ಶೇ.28ರಷ್ಟು ಜಿಎಸ್‌ಟಿಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾಶುಲ್ಕ ಮಂಡಳಿ (ಸಿಬಿಐಸಿ)ಯು ಪ್ರಕಟಿಸಿದೆ.
ಆನ್‌ಲೈನ್ ಗೇಮಿಂಗ್ ಮೇಲೆ ತೆರಿಗೆ ವಿಧಿಸುವ ಸರಕಾರದ ಕ್ರಮವು ವಿವಿಧ ಕ್ಷೇತ್ರಗಳನ್ನು ಜಿಎಸ್‌ಟಿ ವಾಪ್ತಿಯಡಿ ತರುವ ಮತ್ತು ತೆರಿಗೆ ಸಂಗ್ರಹಣೆಯನ್ನು ಸುಗಮಗೊಳಿಸುವ ಪ್ರಯತ್ನಗಳ ಭಾಗವಾಗಿದೆ. ಎಲ್ಲ ರಾಜ್ಯಗಳ ಸಹಮತದೊಂದಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇತ್ತೀಚಿಗೆ ಜಿಎಸ್‌ಟಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಗೆ ಅನುಗುಣವಾಗಿದೆ. ಆನ್‌ಲೈನ್ ಗೇಮಿಂಗ್ ಮೇಲೆ ಜಿಎಸ್‌ಟಿ ದರಕ್ಕಾಗಿ ಕಾನೂನನ್ನು ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಬೇಕಿದೆ. ಕೆಲವು ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಶೋಕಾಸ್ ನೋಟಿಸ್‌ಗಳು ಕಾನೂನು ಪ್ರಕ್ರಿಯೆಯಾಗಿದೆ ಎಂದು ಸಿಬಿಐಸಿ ಅಧ್ಯಕ್ಷ ಸಂಜಯ ಅಗರವಾಲ್ ತಿಳಿಸಿದರು.