ಹರ್ಯಾಣ| ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಶಾಲಾ ಬಸ್: 6 ಮಕ್ಕಳು ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಾಯ

Update: 2024-04-11 11:45 IST
ಹರ್ಯಾಣ| ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಶಾಲಾ ಬಸ್: 6 ಮಕ್ಕಳು ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಾಯ

Photo : NDTV

  • whatsapp icon

ಚಂಡೀಗಢ: ಹರ್ಯಾಣಾದ ನರ್ನೌಲ್‌ ಎಂಬಲ್ಲಿ ಇಂದು ಶಾಲಾ ಬಸ್‌ ಒಂದು ಉರುಳಿ ಬಿದ್ದ ಪರಿಣಾಮ ಆರು ಮಕ್ಕಳು ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಂದು ಈದ್-ಉಲ್-ಫಿತ್ರ್‌ ರಜೆ ಇದ್ದ ಹೊರತಾಗಿಯೂ ಶಾಲೆ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ.

ಈ ಬಸ್‌ ಉನ್ಹಾನಿ ಗ್ರಾಮದ ಜಿ ಎಲ್‌ ಪಬ್ಲಿಕ್‌ ಸ್ಕೂಲ್‌ಗೆ ಸೇರಿದೆ. ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್‌ ಮರಕ್ಕೆ ಢಿಕ್ಕಿ ಹೊಡೆದಿದೆ. ಬಸ್‌ ಚಾಲಕ ಮದ್ಯದ ನಶೆಯಲ್ಲಿದ್ದಿರಬಹುದು ಎಂಬ ಶಂಕೆಯಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಗಾಯಾಳು ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಸ್‌ನ ಫಿಟ್ನೆಸ್‌ ಪ್ರಮಾಣಪತ್ರ ಆರು ವರ್ಷಗಳ ಹಿಂದೆ, 2018ರಲ್ಲಿ ಅವಧಿ ಮೀರಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News