ಇಸ್ರೇಲ್ ರಾಯಭಾರ ಕಚೇರಿ ಬಳಿ ʼಭಾರೀ ಸ್ಪೋಟʼದ ಶಬ್ದ, ರಾಯಭಾರಿಗೆ ಬರೆದ ಪತ್ರ ಪತ್ತೆ

Update: 2023-12-26 16:25 GMT

Photo: PTI 

ಹೊಸದಿಲ್ಲಿ: ಇಂದು ಸಂಜೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ "ಸ್ಫೋಟ" ಕೇಳಿಬರುತ್ತಿರುವ ಬಗ್ಗೆ ದಿಲ್ಲಿ ಪೊಲೀಸರಿಗೆ ಕರೆ ಬಂದಿರುವುದಾಗಿ ವರದಿಯಾಗಿದೆ. ದಿಲ್ಲಿ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದಾಗ ಅನುಮಾನಾಸ್ಪದವಾಗಿ ಯಾವ ವಸ್ತುಗಳೂ ಸಿಗಲಿಲ್ಲ ಎಂದು ndtv ವರದಿ ಮಾಡಿದೆ.

ಹುಟುಕಾಟ ನಡೆಸಿದಾಗ ರಾಯಭಾರ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಖಾಲಿ ಜಮೀನಿನಲ್ಲಿ, ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ಬರೆದ ಪತ್ರವೊಂದು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News