ಆಪ್‌ ಸರಕಾರ ನ್ಯಾಯಾಲಯದಲ್ಲಿʼದುರುದ್ದೇಶಪೂರಿತʼ ದಾವೆಗಳನ್ನು ಹೂಡುತ್ತಿದೆ: ದಿಲ್ಲಿ ಸರಕಾರದ ವಿರುದ್ಧ ಕೇಂದ್ರಕ್ಕೆ ಲೆಫ್ಟಿನೆಂಟ್ ಗವರ್ನರ್ ದೂರು

Update: 2024-04-05 05:29 GMT

Photo: PTI

ಹೊಸದಿಲ್ಲಿ: ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ "ದುರುದ್ದೇಶಪೂರಿತ ಮತ್ತು ಪೂರ್ವಯೋಜಿತ" ದಾವೆಗಳನ್ನು ನ್ಯಾಯಾಲಯದಲ್ಲಿ ಹೂಡುತ್ತಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಕಚೇರಿ ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಆಪಾದಿಸಿದೆ.

ಸಕ್ಸೇನಾ ಅವರ ಮುಖ್ಯ ಕಾರ್ಯದರ್ಶಿ ಆಶೀಶ್ ಕುಂದ್ರಾ ಬರೆದಿರುವ ಐದು ಪುಟಗಳ ಪತ್ರದಲ್ಲಿ, ಚುನಾಯಿತ ಸರ್ಕಾರ ಶುದ್ಧ ಸುಳ್ಳು ಅಫಿಡವಿಟ್ಗ ಳನ್ನು ಸಲ್ಲಿಸುವ ಮೂಲಕ ಇಂಥ ಉದ್ದೇಶಪೂರ್ವಕ ದಾವೆಗಳಿಗೆ ದೃಢೀಕರಣ ಪಡೆಯುತ್ತಿದೆ ಎಂದು ದೂರಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಜಿಎನ್ ಸಿಟಿಡಿ ವರ್ಸಸ್ ಲೆಫ್ಟಿನೆಂಟ್ ಗವರ್ನರ್ ಪ್ರಕರಣಗಳು ಪದೇ ಪದೇ ವಿಚಾರಣೆಗೆ ಬರುತ್ತಿವೆ ಎಂದು ವಿಶೇಷ ಪ್ರಕರಣಗಳನ್ನು ಉಲ್ಲೇಖಿಸಿ ಅವರು ಮಾಹಿತಿ ನೀಡಿದ್ದಾರೆ. ನ್ಯಾಯಾಲಯವನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಈ ಮೂಲಕ ಮಾಧ್ಯಮಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಸುಳ್ಳು ಹಾಗೂ ಘನತೆಗೆ ಧಕ್ಕೆ ತರುವ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ ದೆಹಲಿಯ ವಿವಿಧ ಕೋರ್ಟ್ ಗಳಲ್ಲಿ ಪ್ರಸ್ತುತ ಇರುವ ಹಲವು ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಯ ಮೇಲೆ ಹೊರೆಯಾಗುತ್ತಿವೆ ಮತ್ತು ಕೋಟ್ಯಂತ ರೂಪಾಯಿ ಹಣ ಹಾಗೂ ಸರ್ಕಾರಿ ಅಧಿಕಾರಿಗಳ ಸಮಯ ವ್ಯಯವಾಗಲು ಕಾರಣವಾಗುತ್ತಿವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News