ದಿಲ್ಲಿ ಮುಖ್ಯಮಂತ್ರಿ ನಿವಾಸ ಪ್ರವೇಶಕ್ಕೆ ನಿರಾಕರಣೆ: ಆಪ್ ನಾಯಕರಿಂದ ಧರಣಿ
Update: 2025-01-08 07:16 GMT
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಪೊಲೀಸರು ಪ್ರವೇಶ ನಿರಾಕರಿಸಿದ್ದನ್ನು ವಿರೋಧಿಸಿ ಆಪ್ ನಾಯಕರಾದ ಸೌರಭ್ ಭಾರದ್ವಾಜ್ ಹಾಗೂ ಸಂಜಯ್ ಸಿಂಗ್ ದಿಲ್ಲಿ ಮುಖ್ಯಮಂತ್ರಿಗಳ ನಿವಾಸದೆದುರು ಧರಣಿ ನಡೆಸಿದ ಘಟನೆ ನಡೆದಿದೆ.
ಇದಕ್ಕೂ ಮುನ್ನ, ಮುಖ್ಯಮಂತ್ರಿಗಳ ನಿವಾಸವನ್ನು ‘ಶೀಶ್ ಮಹಲ್’ ಎಂದು ಆರೋಪಿಸಿದ್ದ ಬಿಜೆಪಿ ಹಾಗೂ ಆ ಆರೋಪಕ್ಕೆ ಸಂಬಂಧಿಸಿದಂತೆ ವಿವಾದ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಮಾಧ್ಯಮ ಸಿಬ್ಬಂದಿಗಳೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುವಂತೆ ನಿನ್ನೆ ಸಂಜಯ್ ಸಿಂಗ್ ಸವಾಲು ಹಾಕಿದ್ದರು.