ತೆಲುಗು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ನಟಿ ಕಸ್ತೂರಿ ಶಂಕರ್ ಬಂಧನ
ಹೈದರಾಬಾದ್: ತಮಿಳುನಾಡಿನಲ್ಲಿ ವಾಸಿಸುತ್ತಿರುವ ತೆಲುಗು ಭಾಷಿಕ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.
ಹಿಂದೂ ಮಕ್ಕಳ್ ಕಚ್ಚಿ ಸಭೆಯೊಂದರಲ್ಲಿ 50 ವರ್ಷದ ನಟಿ ಕಸ್ತೂರಿ ಶಂಕರ್ ನೀಡಿದ್ದ ಹೇಳಿಕೆಯನ್ನು ತಮಿಳುನಾಡಿನಲ್ಲಿನ ಬಿಜೆಪಿಯ ರಾಷ್ಟ್ರೀಯ ಸಹ ಉಸ್ತುವಾರಿ ಡಾ. ಪೊಂಗುಲೇಟಿ ಸುಧಾಕರ್ ರೆಡ್ಡಿ ಬಲವಾಗಿ ಖಂಡಿಸಿದ್ದರು ಹಾಗೂ ಆಕೆಯ ಕ್ಷಮಾಪಣೆಗಾಗಿ ಆಗ್ರಹಿಸಿದ್ದರು.
“ಆಕೆಯ ಹೇಳಿಕೆಯಿಂದ ತಮಿಳುನಾಡಿನ ಜನರ ನಡುವೆ ಇರುವ ಸೌಹಾರ್ದ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಹಾಗೂ ಇದು ವಸುಧೈವ ಕುಟುಂಬಕಂ ಪರಿಕಲ್ಪನೆಗೆ ವಿರುದ್ಧವಾಗಿದೆ” ಎಂದು ಡಾ. ಪೊಂಗಲೇಟಿ ಸುಧಾಕರ್ ರೆಡ್ಡಿ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದರು.
ಇದರ ಬೆನ್ನಿಗೇ, “ನವೆಂಬರ್ 3ರಂದು ತೆಲುಗು ಭಾಷಿಕರಿಗೆ ಸಂಬಂಧಿಸಿದಂತೆ ನಾನು ನೀಡಿದ್ದ ಎಲ್ಲ ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ” ಎಂದು ನವೆಂಬರ್ 6ರಂದು ಪ್ರಕಟಿಸಿದ್ದ ನಟಿ ಕಸ್ತೂರಿ ಶಂಕರ್, “ತೆಲುಗು ಭಾಷಿಕರಿಗೆ ನೋವುಂಟು ಮಾಡುವುದು ಅಥವಾ ಅವರನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ” ಎಂದೂ ಸ್ಪಷ್ಟೀಕರಣ ನೀಡಿದ್ದರು.