ಪ್ರಧಾನಿ ಭಾಷಣವನ್ನು 8 ಭಾಷೆಗಳಲ್ಲಿ ಪ್ರಸಾರ ಮಾಡಲಿರುವ ಎಐ

Update: 2024-03-06 16:02 GMT

ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳ ಪ್ರೇಕ್ಷಕರ ನಡುವಿನ ಭಾಷಾ ಕಂದರವನ್ನು ನಿವಾರಿಸಲು ಬಿಜೆಪಿ ಕೃತಕ ಬುದ್ಧಿಮತ್ತೆ (ಎಐ)ಯ ಮೊರೆ ಹೋಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎಂಟು ಭಾಷೆಗಳಲ್ಲಿ ನೇರ ಪ್ರಸಾರವನ್ನು ಖಾತರಿಪಡಿಸಿಕೊಳ್ಳಲು ಕೃತಕಬುದ್ಧಿಮತ್ತೆಯ ಸಾಧನಗಳನ್ನು ಬಳಸಲು ಬಿಜೆಪಿ ನಿರ್ಧರಿಸಿದೆ.

ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭ ಪ್ರಧಾನಿ ಅವರು ಭಾಷಣಗಳು ವಾಸ್ತವ ಸಮಯದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅನುವಾದವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಹೈಟೆಕ್ ವ್ಯವಸ್ಥೆ ಬೇಡಿಕೆಗೆ ಅನುಗುಣವಾಗಿ ಪ್ರಧಾನಿ ಅವರ ಹಿಂದಿ ಭಾಷಣವನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುತ್ತದೆ ಎಂದು ಪಕ್ಷದ ಮೂಲ ತಿಳಿಸಿದೆ.

ಶಾಸಕರು ಹಾಗೂ ಮಾಧ್ಯಮ ಗ್ಯಾಲರಿಯ ಪತ್ರಕರ್ತರು ವಾಸ್ತವ ಸಮಯದಲ್ಲಿ ನಿಗದಿತ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣಗಳು ಹಾಗೂ ಸಂಸತ್ತಿನ ಅಧಿವೇಶನದ ಸಂದರ್ಭ ಕಲಾಪಗಳನ್ನು ಹೇಗೆ ವೀಕ್ಷಿಸುತ್ತಾರೆ ಎಂದು ನೀವು ಗಮನಿಸಿರಬಹುದು. ಇದನ್ನು ಕೃತಕ ಬುದ್ಧಿ ಮತ್ತೆ ಬಳಸಿ ಮಾಡಲಾಗುತ್ತದೆ. ಇಂತಹ ವ್ಯವಸ್ಥೆ ಪ್ರಧಾನಿ ಅವರ ಭಾಷಣಕ್ಕೆ ವ್ಯಾಪಕತೆ ತಂದು ಕೊಡಲಿದೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭ ಪ್ರಧಾನಿ ಅವರ ಭಾಷಣವನ್ನು ಬೆಂಗಾಳಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒರಿಯಾ, ಮರಾಠಿ ಹಾಗೂ ಮಲೆಯಾಳಂಗೆ ಭಾಷಾಂತರಿಸಲಾಗುತ್ತದೆ ಹಾಗೂ ಪ್ರಸಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

2023ರಲ್ಲಿ ಪ್ರಧಾನಿ ಅವರು ಮೊದಲ ಬಾರಿಗೆ ಕೃತಕ ಬುದ್ಧಿ ಮತ್ತೆಯನ್ನು ಬಳಿಸಿದರು. ವಾರಣಾಸಿಯಲ್ಲಿ ನಡೆದ ಕಾಶಿ ತಮಿಳ್ ಸಂಗಮಂನ ಪ್ರೇಕ್ಷಕರಿಗಾಗಿ ಅವರ ಭಾಷಣವನ್ನು ಭಾಷಾಂತರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News