ಗಾಝಾದಲ್ಲಿ ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ ; ಮ್ಯಾಗ್ಸೆಸೆ ಪ್ರಶಸ್ತಿ ಹಿಂದಿರುಗಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ

Update: 2024-01-02 16:59 GMT

 ಸಂದೀಪ್ ಪಾಂಡೆ | Photo: X \@sandeep4justice 

ಹೊಸದಿಲ್ಲಿ: ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಅಮೆರಿಕದ ಪಾತ್ರವನ್ನು ವಿರೋಧಿಸಿ 2002ರಲ್ಲಿ ತಮಗೆ ನೀಡಲಾಗಿದ್ದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಮಂಗಳವಾರ ಹೇಳಿದ್ದಾರೆ.

ಸೋಷಿಯಲಿಸ್ಟ್ ಪಾರ್ಟಿದೊಂದಿಗೆ ಗುರುತಿಸಿಕೊಂಡಿರುವ ಪಾಂಡೆ ಅವರು ಅಮೆರಿಕದ ವಿಶ್ವವಿದ್ಯಾಲಯಗಳಿಂದ ಗಳಿಸಿದ ಎರಡು ಸ್ನಾತಕೋತ್ತರ ವಿಜ್ಞಾನ ಪದವಿಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿಯು ರಾಕ್‌ಫೆಲ್ಲರ್ ಫೌಂಡೇಶನ್‌ನಿಂದ ಧನಸಹಾಯ ಪಡೆದಿದೆ. ಅವರು ಗೌರವವನ್ನು ಪಡೆದ ವಿಭಾಗವು ಫೋರ್ಡ್ ಫೌಂಡೇಶನ್‌ನಿಂದ ಧನಸಹಾಯ ಪಡೆದಿದೆ. ಈ ಎರಡೂ ಅಮೆರಿಕ ಮೂಲದವು ಎಂದು ಸಂದೀಪ್ ಪಾಂಡೆ ಹೇಳಿದರು.

"ಫೆಲೆಸ್ತೀನ್ ಪ್ರಜೆಗಳ ವಿರುದ್ಧದ ಆಕ್ರಮಣದಲ್ಲಿ ಇಸ್ರೇಲ್ ಗೆ ಅಮೇರಿಕ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ಗಾಝಾ ಮೇಲಿನ ಆಕ್ರಮಣದಲ್ಲಿ 21,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇನ್ನೂ ಇಸ್ರೇಲ್ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದನ್ನು ಅಮೆರಿಕ ಮುಂದುವರೆಸುತ್ತಿದೆ. ಈ ಬೆಳವಣಿಗೆಗಳು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ನನಗೆ ಅಸಹನೀಯವೆನಿಸಿದೆ. ಅಂತಿಮವಾಗಿ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸುತ್ತಿದ್ದೇನೆ" ಎಂದು ಪಾಂಡೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News