ಅಸ್ಸಾಂ: ಅಪ್ರಾಪ್ತ ವಯಸ್ಕ ಮುಸ್ಲಿಂ ವಿವಾಹಕ್ಕೆ ಅನುಮತಿ ನೀಡುವ ಕಾನೂನು ರದ್ದತಿಗೆ ನಿರ್ಧಾರ

Update: 2024-07-19 02:21 GMT

ಗುವಾಹತಿ: ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಿದ ಅಗ್ರ ರಾಜ್ಯ ಎಂದು ಇತ್ತೀಚೆಗೆ ನಡೆದ ಸ್ವತಂತ್ರ ರಾಷ್ಟ್ರೀಯ ಸಮೀಕ್ಷೆಯೊಂದರಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿರುವ ಅಸ್ಸಾಂ, ಮುಸ್ಲಿಂ ಸಮುದಾಯದ ಅಪ್ರಾಪ್ತ ವಯಸ್ಸಿನವರಿಗೆ ವಿವಾಹ ನೆರವೇರಿಸಲು ಅವಕಾಶ ನೀಡುವ 1935ರ ಕಾಯ್ದೆಯನ್ನು ರದ್ದುಪಡಿಸಲು ನಿರ್ಧರಿಸಿದೆ.

ಎಲ್ಲ ಷರತ್ತುಗಳನ್ನು ಪೂರೈಸುವುದಾದಲ್ಲಿ, ಈ ವಿವಾಹಕ್ಕೆ ಅವಕಾಶ ನೀಡುವ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ಸಂಪುಟ ಸಭೆ ಅಂಗೀಕರಿಸಿದೆ.

ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದ್ದು, ಇದು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ಹಾಗೂ ನಿಯಮಾವಳಿಗಳನ್ನು ರದ್ದುಪಡಿಸುತ್ತದೆ. ವಿಧಾನಸಭೆಯ ಮುಂದಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ" ಎಂದು ಹೇಳಲಾಗಿದೆ.

ಬಾಲ್ಯವಿವಾಹವನ್ನು ಕೊನೆಗೊಳಿಸುವ ಉದ್ದೇಶದ ಮಸೂದೆ ಕುರಿತ ಸಂಪುಟ ಟಿಪ್ಪಣಿಯಲ್ಲಿ, "ವಿವಾಹ ನೋಂದಣಿ ಮತ್ತು ವಿಚ್ಛೇದನದಲ್ಲಿ ಏಕರೂಪತೆ ತರುವ ಅಗತ್ಯವಿದೆ ಎಂದು ಸಂಪುಟ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News