ಅಸ್ಸಾಂ: 100 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ನಾಲ್ವರ ಬಂಧನ

Update: 2024-01-09 17:04 GMT

ಸಾಂದರ್ಭಿಕ ಚಿತ್ರ

ಗುವಾಹಟಿ: ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು 100 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂ ಪೊಲೀಸ್ ನ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಹಾಗೂ ಕರೀಂಗಂಜ್ ಜಿಲ್ಲಾ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭ ಈ ಮಾದಕ ವಸ್ತುಗಳು ಪತ್ತೆಯಾಗಿವೆ.

‘‘ಮಿಜೋರಾಂನಿಂದ ಕರೀಂಗಂಜ್ ಗೆ ಮಾದಕ ವಸ್ತು ಬರುತ್ತಿದೆ ಎಂಬ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಈ ಮಾಹಿತಿಯಂತೆ ನಾವು ನೀಲಂಬಝಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಪ್ರಖಂಡಿಯಲ್ಲಿ ತಡ ರಾತ್ರಿ 2.15ಕ್ಕೆ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದೆವು’’ ಎಂದು ಎಸ್ ಟಿ ಎಫ್ ನ ಡಿಐಜಿ ಪಾರ್ಥಸಾರತಿ ಮಹಾಂತ ತಿಳಿಸಿದ್ದಾರೆ.

ಮಿಜೋರಾಂನ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಈ ವಾಹನವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ 5.1 ಕಿ.ಗ್ರಾಂ. ಹೆರಾಯಿನ್, 64,000 ಯಾಬಾ ಮಾತ್ರೆಗಳು ಹಾಗೂ 4 ಪ್ಯಾಕೇಟ್ ವಿದೇಶಿ ಸಿಗರೇಟುಗಳು ಪತ್ತೆಯಾದುವು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News