ನಲ್ಲಿ ನೀರು ಕುಡಿದದ್ದಕ್ಕೆ ಹಲ್ಲೆ: ದಲಿತ ವ್ಯಕ್ತಿ ಸಾವು

Update: 2023-11-28 18:01 GMT

ಬದೌನ್: 'ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದಿದ್ದಕ್ಕಾಗಿ ಥಳಿತಕ್ಕೊಳಗಾಗಿದ್ದ ದಲಿತ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ‘ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತರನ್ನು ಕಮಲೇಶ್ ಎಂದು ಗುರುತಿಸಲಾಗಿದೆ. ಬದೌನ್ ಜಿಲ್ಲೆಯ ಉಸಹೈತ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾತ್ರ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ವರದಿಯಾಗಿದೆ.

ನೀರು ಕುಡಿದದ್ದಕ್ಕಾಗಿ, ಸೂರಜ್ ರಾಥೋಡ್ ಹಾಗೂ ಆತನ ಸಹಚರರು ಕಮಲೇಶ್ ಅವರಿಗೆ ಬಡಿಗೆಗಳಿಂದ ಹೊಡೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕಮಲೇಶ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಅವರು ಮೃತಪಟ್ಟರು ಎಂದು ಎಎಸ್ಪಿ ಅಮಿತ್ ಕಿಶೋರ್ ಶ್ರೀವಾಸ್ತವ ತಿಳಿಸಿದ್ದಾರೆ.

‘ಮೃತನ ತಂದೆ ಜಗದೀಶ್ ನೀಡಿರುವ ದೂರಿನ ಆಧಾರದ ಮೇಲೆ ರಾಥೋಡ್ನನ್ನು ಬಂಧಿಸಿ, ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News