ಯೂಟ್ಯೂಬರ್ ಮೇಲೆ ಹಲ್ಲೆ: ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲು

Update: 2024-03-09 06:43 GMT

Photo: X\ @gharkekalesh

ಗುರುಗ್ರಾಮ: ದಿಲ್ಲಿ ಮೂಲದ ಯೂಟ್ಯೂಬರ್ ಓರ್ವನ ಮೇಲೆ ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಹಾಗೂ ಇನ್ನೂ ಕೆಲವು ಮಂದಿ ಹಲ್ಲೆ ನಡೆಸಿರುವ ಘಟನೆ ಸೆಕ್ಟರ್ 53 ಪ್ರದೇಶದ ಮಾಲ್ ಒಂದರಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಎಲ್ವಿಶ್ ಯಾದವ್ ಹಲ್ಲೆ ನಡೆಸಿರುವುದು ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದಿಲ್ಲಿ ನಿವಾಸಿಯಾದ ಸಾಗರ್ ಠಾಕೂರ್ ಈ ಸಂಬಂಧ ದೂರು ದಾಖಲಿಸಿದ್ದು, ಎಲ್ವಿಶ್ ಯಾದವ್ ನನ್ನ ಬೆನ್ನು ಮೂಳೆ ಮುರಿಯಲು ಪ್ರಯತ್ನಿಸಿದರಲ್ಲದೆ, ನನಗೆ ಕೊಲೆ ಬೆದರಿಕೆಯನ್ನೂ ಹಾಕಿದರು ಎಂದು ಆರೋಪಿಸಿದ್ದಾರೆ.

ಸಾಗರ್ ಠಾಕೂರ್ ಓರ್ವ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಯೂಟ್ಯೂಬ್ ನಲ್ಲಿ 16 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 8,90,000 ಹಿಂಬಾಲಕರನ್ನು ಹೊಂದಿದ್ದರೆ, ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ 2,50,000 ಹಿಂಬಾಲಕರನ್ನು ಹೊಂದಿದ್ದಾರೆ.

ನಾನು ಹಾಗೂ ಎಲ್ವಿಶ್ ಯಾದವ್ 2021ರಿಂದ ಪರಸ್ಪರ ಪರಿಚಿತರು ಎಂದು ಠಾಕೂರ್ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ದೂರನ್ನು ಆಧರಿಸಿ ಶುಕ್ರವಾರ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಠಾಣಾಧಿಕಾರಿ ರಾಜೇಂದರ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News