ರಾಮ ನವಮಿ ಆಚರಣೆ ವೇಳೆ ಬಾಣವನ್ನು ಮಸೀದಿಯತ್ತ ಸಾಂಕೇತಿಕವಾಗಿ ಗುರಿಯಾಗಿಸಿ ವಿವಾದಕ್ಕೀಡಾದ ಬಿಜೆಪಿ ಅಭ್ಯರ್ಥಿ
Update: 2024-04-18 17:19 IST

Screengrab:X/@zoo_bear
ಹೈದರಾಬಾದ್: ಹೈದರಾಬಾದ್‌ನಲ್ಲಿ ಬುಧವಾರ ನಡೆದ ರಾಮ ನವಮಿ ಆಚರಣೆಯ ಸಂದರ್ಭ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲ ಮಾಧವಿ ಲತಾ ಅವರು ಸಾಂಕೇತಿಕವಾಗಿ ಬಾಣವನ್ನು ಮಸೀದಿಯತ್ತ ಗುರಿಯಾಗಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘಿಸಲ್ಪಟ್ಟ ಕೆಲವೇ ದಿನಗಳ ನಂತರ ಲತಾ ಆಯೋಜಿಸಿದ್ದ ರೋಡ್ ಶೋ ವೇಳೆ ಈ ಘಟನೆ ನಡೆದಿದೆ. ಅವರು ಈ ರೀತಿ ಬಾಣವನ್ನು ಮಸೀದಿಯತ್ತ ಸಾಂಕೇತಿಕವಾಗಿ ಗುರಿಯಾಗಿಸಿದ್ದು ಶಾಂತಿಗೆ ಭಂಗ ತರುವ ಯತ್ನ ಎಂದು ಆರೋಪಿಸಲಾಗಿದೆ. ಚುನಾವಣಾ ಆಯೋಗ ಈ ಕುರಿತು ಪರಿಶೀಲಿಸಿ ಮಾಧವಿ ಲತಾ ವಿರುದ್ಧ ಕ್ರಮಕೈಗೊಳ್ಳಬೇಕೆಂದೂ ಹಲವರು ಆಗ್ರಹಿಸಿದ್ದಾರೆ.