ವಿವಾದಾತ್ಮಕ ಹೇಳಿಕೆ: ಬಂಗಾಳ ಮುಖಂಡನಿಗೆ ಬಿಜೆಪಿ ಕೊಕ್

Update: 2023-12-27 04:18 GMT

Photo: twitter.com/SocialNewsDail2

ಹೊಸದಿಲ್ಲಿ: ಪಕ್ಷದ ನೀತಿಗೆ ವಿರುದ್ಧವಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬೋಲಪುರ ಸಂಸದ ಅನುಪಮ್ ಹಝ್ರಾ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿದೆ.

ಈ ನಿರ್ಧಾರವನ್ನು ತಕ್ಷಣದಿಂದ ಜಾರಿಗೊಳಿಸಲಾಗಿದ್ದು, ಗೃಹಸಚಿವ ಅಮಿತ್ ಶಾ ದೆಹಲಿಗೆ ಭೇಟಿ ನೀಡುವ ದಿನ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಈ ಪ್ರಕ್ರಿಯೆ ಕೈಗೊಂಡಿದ್ದಾರೆ.

2014ರಲ್ಲಿ ತೃಣಮೂಲ ಕಾಂಗ್ರೆಸ್ ಟಿಕೆಟ್ ನಿಂದ ಗೆದ್ದಿದ್ದ ಹಝ್ರಾ, ಬಳಿಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಇವರು ಪಕ್ಷದ ಪರಿಶಿಷ್ಟ ಜಾತಿಯ ಪ್ರಮುಖ ಮುಖಂಡರಾಗಿದ್ದು, 2020ರಲ್ಲಿ ಪಕ್ಷದ ಉನ್ನತ ಹುದ್ದೆ ನೀಡಲಾಗಿತ್ತು. 2023ರಲ್ಲಿ ಅವರನ್ನು ಎರಡನೇ ಅವಧಿಗೆ ಮುಂದುವರಿಸಲಾಗಿತ್ತು. ಇವರು ಬಿಹಾರದ ಸಹ ಉಸ್ತುವಾರಿ ಹೊಣೆಯನ್ನೂ ಹೊಂದಿದ್ದರು.

ಆದರೆ ಕಳೆದ ಕೆಲ ತಿಂಗಳಿನಿಂದ ಇವರ ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು. ಕಳೆದ ಸೆಪ್ಟೆಂಬರ್ ನಲ್ಲಿ ಸಿಬಿಐ ಅಥವಾ ಕಾನೂನು ಜಾರಿ ನಿರ್ದೇಶನಾಲಯದ ಸಮನ್ಸ್ ನಿರೀಕ್ಷೆಯಲ್ಲಿರುವ ತೃಣಮೂಲ ಕಾಂಗ್ರೆಸ್ನ ಭ್ರಷ್ಟ ಮುಖಂಡರು ತಮ್ಮನ್ನು ಸಂಪರ್ಕಿಸಬಹುದು ಎಂಬ ಇವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಪಕ್ಷದ ವಿರುದ್ಧ ತೃಣಮೂಲ ಕಾಂಗ್ರೆಸ್ ವಾಷಿಂಗ್ ಮಿಷನ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಇವರು ನೀಡಿದ್ದ ಈ ಹೇಳಿಕೆಯಿಂದ ಪಕ್ಷದ ರಾಜ್ಯ ಘಟಕ ಅಂತರ ಕಾಯ್ದುಕೊಂಡಿತ್ತು.

"ನೀವು ನನ್ನ ಫೇಸ್ಬುಕ್ ಪೇಜ್ಗೆ ಭೇಟಿ ನೀಡಿ ನನ್ನನ್ನು ಸಂಪರ್ಕಿಸಬಹುದು. ನಿಮಗೆ ಮುಂದೆ ಬರಲು ಸಂಕೋಚವಾದರೆ ಮತ್ತು ಬಿಜೆಪಿಗೆ ಸೇರುವ ಬಗ್ಗೆ ಜತೆ ಮಾತುಕತೆ ನಡೆಸಬೇಕಿದ್ದರೆ, ನಿಮ್ಮ ಇಚ್ಛೆಯ ಬಗ್ಗೆ ಮಾತನಾಡಲು ನನ್ನನ್ನು ಸಂಪರ್ಕಿಸಬಹುದು. ಪಕ್ಷಕ್ಕೆ ನಿಮ್ಮ ಸೇವೆ ಸಲ್ಲುವಂತೆ ನಾವು ಮಾಡುತ್ತೇವೆ" ಹೇಳಿಕೆ ನೀಡಿದ್ದು, ವ್ಯಾಪಕವಾಗಿ ಹರಿದಾಡುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News