ಮುಸ್ಲಿಂ ಸಮುದಾಯವನ್ನು ನುಸುಳುಕೋರರು ಎಂದು ಪ್ರಧಾನಿ ದ್ವೇಷ ಭಾಷಣ ಮಾಡಿದ್ದ ಬನ್ಸ್ವಾರದಲ್ಲಿ ಬಿಜೆಪಿಗೆ ಹೀನಾಯ ಸೋಲು
Update: 2024-06-05 09:29 GMT
ಹೊಸದಿಲ್ಲಿ: ರಾಜಸ್ಥಾನದ ಬನ್ಸ್ವಾರ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿನ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಸಮುದಾಯವನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರು ಎಂದು ಹೇಳುವ ಮೂಲಕ ಆಕ್ರೋಶಕ್ಕೆಡೆ ಮಾಡಿದ್ದರು.
ಇದೇ ಕ್ಷೇತ್ರದಲ್ಲಿ ಬಿಜೆಪಿಯ ಮಹೇಂದ್ರಜೀತ್ ಮಾಲವಿಯಾ ಅವರು ಭಾರತ್ ಆದಿವಾಸಿ ಪಕ್ಷದ ರಾಜಕುಮಾರ್ ರೋಟ್ ಅವರೆದುರು 2,47,054 ಮತಗಳಿಂದ ಪರಾಜಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಗೆದ್ದ ಅಂತರಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಈ ಕ್ಷೇತ್ರದಲ್ಲಿ ರಾಜಕುಮಾರ್ ವಿಜೇತರಾಗಿದ್ದಾರೆ.
ಪ್ರಧಾನಿಯ ಈ ವಿವಾದಾತ್ಮಕ ಭಾಷಣದ ನಂತರ ಹಲವು ಹೋರಾಟಗಾರರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಈ ದ್ವೇಷದ ಭಾಷಣವನ್ನು ಖಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು.