ʼನಿರ್ಲಜ್ಜ ಹಸ್ತಕ್ಷೇಪʼ: ಅರವಿಂದ್ ಕೇಜ್ರಿವಾಲ್ ಬಂಧನ ಕುರಿತು ಜರ್ಮನಿಯ ಪ್ರತಿಕ್ರಿಯೆಗೆ ಭಾರತ ವಿರೋಧ

Update: 2024-03-23 09:19 GMT

 ಅರವಿಂದ್ ಕೇಜ್ರಿವಾಲ್, ಜಾರ್ಜ್ ಎಂಝ್ವೀಲರ್ | Photo: ANI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಅರವಿಂದ್ ಕೇಜ್ರಿವಾಲ್ ಕುರಿತು ಜರ್ಮನಿಯ ರಾಯಭಾರಿಯು ನೀಡಿರುವ ಹೇಳಿಕೆಯ ವಿರುದ್ಧ ಭಾರತವಿಂದು ಪ್ರತಿಭಟನೆ ದಾಖಲಿಸಿದೆ. “ಜರ್ಮನಿ ರಾಯಭಾರಿಯ ಹೇಳಿಕೆಯು ಭಾರತದ ಆಂತರಿಕ ವಿಚಾರಗಳಲ್ಲಿನ ನಿರ್ಲಜ್ಜ ಹಸ್ತಕ್ಷೇಪವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ಹೇಳಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ತನ್ನ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಲು ಜರ್ಮನಿ ರಾಯಭಾರ ಕಚೇರಿಯ ಉಪ ಕಾರ್ಯಾಚರಣೆ ಮುಖ್ಯಸ್ಥ ಜಾರ್ಜ್ ಎಂಝ್ವೀಲರ್ ಅವರನ್ನು ಕರೆಸಿಕೊಂಡಿತ್ತು.

ಭಾರತವು ಪ್ರಜಾಸತ್ತಾತ್ಮಕ ದೇಶವಾಗಿರುವುದರಿಂದ ಅರವಿಂದ್ ಕೇಜ್ರಿವಾಲ್ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ತಾನು ನಿರೀಕ್ಷಿಸುತ್ತಿದ್ದೇನೆ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿದ ಕೆಲ ಗಂಟೆಗಳ ನಂತರ ಭಾರತವು ಈ ಪ್ರತಿಭಟನೆಯನ್ನು ದಾಖಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News