"ಪುತ್ರನ ನಿಧನದ ಬಳಿಕ ಬಹುತೇಕ ಎಲ್ಲ ನೆರವನ್ನು ಸೊಸೆಯೇ ಪಡೆದಿದ್ದಾರೆ": ಎನ್‍ಒಕೆ ನೀತಿ ಪರಿಷ್ಕರಿಸಲು ಕ್ಯಾಪ್ಟನ್ ಅನ್ಷುಮನ್ ಸಿಂಗ್ ಪೋಷಕರ ಆಗ್ರಹ

Update: 2024-07-12 10:59 GMT

Photo credit: Instagram/@rashtrapatibhvn

ಹೊಸದಿಲ್ಲಿ: ಮಗನಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ಎನಿಸಿದ ಕೀರ್ತಿ ಚಕ್ರವನ್ನು ಪ್ರದಾನ ಮಾಡಿದ ಬೆನ್ನಲ್ಲೇ, ಕ್ಯಾಪ್ಟನ್ ಅನ್ಷುಮನ್ ಸಿಂಗ್ ಅವರ ಪೋಷಕರು ʼನೆಕ್ಸ್ಟ್ ಆಫ್ ಕಿನ್ʼ (ಎನ್‍ಒಕೆ) ನೀತಿಯ ಪರಿಷ್ಕರಣೆಗೆ ಆಗ್ರಹಿಸಿದ್ದಾರೆ.

ನೆಕ್ಸ್ಟ್ ಆಫ್ ಕಿನ್ ಸೇನಾ ಸಿಬ್ಬಂದಿಯ ಮರಣದ ಸಂದರ್ಭದಲ್ಲಿ ಹಣಕಾಸು ನೆರವನ್ನು ಕುಟುಂನಗಳಿಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದ ನೀತಿಯಾಗಿದೆ ಎಂದು ʼಟಿವಿ9 ಭಾರತ್‍ವರ್ಷʼ ವರದಿ ಮಾಡಿದೆ.

ದಿವಂಗತ ಅಧಿಕಾರಿಯ ಪೋಷಕರಾದ ರವಿ ಪ್ರತಾಪ್ ಸಿಂಗ್ ಮತ್ತು ಮಂಜು ಸಿಂಗ್ ಅವರು ಟಿವಿ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಈ ಆತಂಕ ವ್ಯಕ್ತಪಡಿಸಿದ್ದಾರೆ. ಎನ್‍ಒಕೆ ನಿಯಮಾವಳಿಯನ್ನು ಪರುಪರಿಶೀಲನೆ ನಡೆಸುವ ಅಗತ್ಯವಿದೆ. ಮಗನ ನಿಧನದ ಬಳಿಕ ತಮ್ಮ ಸೊಸೆ ಸ್ಮೃತಿ ಸಿಂಗ್ ಬಹುತೇಕ ಎಲ್ಲ ನೆರವನ್ನು ಪಡೆದಿದ್ದಾರೆ. ಆದರೆ ನಾವು ಅವರೊಂದಿಗೆ ವಾಸವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಿಯಾಚಿನ್‍ನಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಕಳೆದ ವರ್ಷದ ಜುಲೈನಲ್ಲಿ ಕರ್ತವ್ಯದಲ್ಲಿದ್ದಾಗ ಕ್ಯಾಪ್ಟನ್ ಅನ್ಷುಮನ್ ಸಿಂಗ್ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News