ಮಹಾರಾಷ್ಟ್ರ| ಬಿಜೆಪಿ ನಾಯಕನಿಂದ ಮತದಾರರಿಗೆ ಹಣ ಹಂಚಿಕೆ ಆರೋಪ, ಹೈಡ್ರಾಮಾ
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ವಿನೋದ್ ತಾವ್ಡೆ ಮತದಾರರಿಗೆ ಹಣ ಹಂಚಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ವಿಡಿಯೋ ವೈರಲ್ ಆಗಿದೆ.
HUGE: a day before Maharashtra goes to polls, major controversy.. BJP national general secretary Vinod Tawde trapped and gheraoed by a BVA MLA in a hotel in Virar, accused of having a Rs 5 crores cash bag with a diary of people to whom money given is reportedly mentioned. BJP… pic.twitter.com/lyChkwJHdZ
— Rajdeep Sardesai (@sardesairajdeep) November 19, 2024
ಬಹುಜನ ವಿಕಾಸ್ ಅಘಾಡಿ ನಾಯಕ ಹಿತೇಂದ್ರ ಠಾಕೂರ್ ಅವರು ಈ ಕುರಿತು ಮಾತನಾಡುತ್ತಾ, ಪಕ್ಷದ ಕಾರ್ಯಕರ್ತರು ತಾವ್ಡೆ ಹಣ ಹಂಚುವುದನ್ನು ನೋಡಿದ್ದಾರೆ. ಐದು ಕೋಟಿ ರೂ. ನಗದನ್ನು ಹಂಚಲಾಗಿದೆ. ನಾವು ಡೈರಿಗಳನ್ನು ವಶಪಡಿಸಿಕೊಂಡಿದ್ದೇವೆ. ತಾವ್ಡೆ ಅವರು ನನಗೆ 25 ಬಾರಿ ಕರೆ ಮಾಡಿ ಕ್ಷಮೆಯಾಚಿಸಿದ್ದಾರೆ. ಚುನಾವಣಾ ಆಯೋಗ, ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹಿತೇಂದ್ರ ಠಾಕೂರ್ ಆಗ್ರಹಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮಹಾರಾಷ್ಟ್ರದ ಹೋಟೆಲ್ ಒಂದರಲ್ಲಿ ಹಣ ಹಂಚುತ್ತಿದ್ದರು. ವಿನೋದ್ ತಾವ್ಡೆ ಬ್ಯಾಗ್ನಲ್ಲಿ ಹಣ ತುಂಬಿಸಿಕೊಂಡು ಅಲ್ಲಿಗೆ ಜನರನ್ನು ಕರೆಸಿ ಹಣ ಹಂಚುತ್ತಿದ್ದರು ಎಂದು ಬಹುಜನ ವಿಕಾಸ್ ಅಘಾಡಿ ಆರೋಪಿಸಿದೆ.
ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಆರೋಪವು ಆಧಾರರಹಿತವಾಗಿವೆ ಎಂದು ಬಿಜೆಪಿ ಎಂಎಲ್ಸಿ ಪ್ರವೀಣ್ ದಾರೇಕರ್ ಹೇಳಿದ್ದಾರೆ.