ಕೇಂದ್ರ ಸರಕಾರ ಶೀಘ್ರವೇ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕು: ಸಿಎಂ ಉಮರ್ ಅಬ್ದುಲ್ಲಾ

Update: 2025-01-02 10:56 GMT

ಉಮರ್ ಅಬ್ದುಲ್ಲಾ (Photo: PTI)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತ ಸ್ಥಾನಮಾನ ಕೇವಲ ತಾತ್ಕಾಲಿಕವಾಗಿದ್ದು, ಕೇಂದ್ರ ಸರಕಾರ ಶೀಘ್ರವೇ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಗುರುವಾರ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದರು.

ಶೇರ್-ಇ-ಕಾಶ್ಮೀರ್ ಇಂಟರ್ ನ್ಯಾಶನಲ್ ಕನ್ವೆಂಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾವು ಅಧಿಕಾರಕ್ಕೆ ಬಂದು ಸುಮಾರು ಎರಡು ತಿಂಗಳುಗಳಾಗಿವೆ. ಕೇಂದ್ರಾಡಳಿತ ಪ್ರದೇಶ ಸರಕಾರ ಹೇಗೆ ಕೆಲಸ ಮಾಡುತ್ತದೆ ಎಂದು ಅರಿಯಲು ನಮಗೆ ಸಮಯಾವಕಾಶ ಹಿಡಿಯಿತು. ನಾವು ಈ ಹಿಂದೆ ಸರಕಾರಗಳಲ್ಲಿ ಭಾಗಿಯಾಗಿದ್ದೆವು. ಆದರೆ, ಈ ಹಿಂದಿನ ರೂಪದ ಸರಕಾರಗಳಿಗೂ ಹಾಗೂ ಈಗಿನ ಸರಕಾರಕ್ಕೂ ತೀವ್ರ ವ್ಯತ್ಯಾಸವಿದೆ” ಎಂದು ಅಭಿಪ್ರಾಯ ಪಟ್ಟರು.

ನೂತನ ಸರಕಾರ ಸಭ್ಯ ರೀತಿಯಲ್ಲಿ ಕಾರ್ಯಾರಂಭ ಮಾಡಿದ್ದು, ನಾವು ಹೆಚ್ಚೇನೂ ಸಮಸ್ಯೆ ಅನುಭವಿಸಲಿಲ್ಲ ಎಂದೂ ಅವರು ಹೇಳಿದರು.

“ನಾವು ನಮ್ಮ ಚುನಾವಣಾ ಭರವಸೆಗಳಿಗೆ ಬದ್ಧರಾಗಿದ್ದೇವೆ. ನಾವು ಈಗಾಗಲೇ ಕೆಲವು ಭರವಸೆಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದು, ಇನ್ನುಳಿದ ಭರವಸೆಗಳನ್ನು ಜಾರಿಗೊಳಿಸಲು ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ತಾತ್ಕಾಲಿಕ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News