ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆ: ಹಿರಿಯ ಉಪ ಮೇಯರ್ ಹುದ್ದೆ ಗೆದ್ದ ಬಿಜೆಪಿ

Update: 2024-03-04 10:05 GMT

 ಕುಲ್ಜಿತ್ ಸಿಂಗ್ ಸಂಧು | Photo X/ Kuljit Sandhu

ಚಂಡೀಗಢ: ಸೋಮವಾರ ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಉಪ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಕಾಂಗ್ರೆಸ್ ಮತ್ತು ಆಪ್ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿದ್ದ ಗುರ್ಪ್ರೀತ್ ಸಿಂಗ್ ಗಬಿಯನ್ನು ಮೂರು ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಕುಲ್ಜಿತ್ ಸಿಂಗ್ ಸಂಧು ನೂತನ ಹಿರಿಯ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಸಂಧು 19 ಮತಗಳನ್ನು ಪಡೆದರೆ, ಗುರ್ಪ್ರೀತ್ 16 ಮತಗಳನ್ನು ಪಡೆದರು. ಯಾವುದೇ ಮತ ಅನೂರ್ಜಿತಗೊಂಡಿಲ್ಲ.

35 ಮಂದಿ ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಕೌನ್ಸಿಲರ್ ಗಳನ್ನು ಹೊಂದಿದೆ. ಇದಕ್ಕೂ ಮುನ್ನ ಕೇವಲ 14 ಸದಸ್ಯರನ್ನು ಹೊಂದಿದ್ದ ಬಿಜೆಪಿಯ ಸಂಖ್ಯಾಬಲವು ಆಪ್ ಪಕ್ಷದ ಮೂವರು ಸದಸ್ಯರು ಬಿಜೆಪಿಗೆ ಪಕ್ಷಾಂತರ ಮಾಡುವ ಮೂಲಕ 17ಕ್ಕೆ ಏರಿಕೆಯಾಗಿತ್ತು. ಅವರೆಲ್ಲ ಫೆಬ್ರವರಿ 19ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದ ಆಮ್ ಅದ್ಮಿ ಪಕ್ಷದ ಸಂಖ್ಯಾಬಲವು 10ಕ್ಕೆ ಕುಸಿದಿದ್ದು, ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿದೆ. ಶಿರೋಮಣಿ ಅಕಾಲಿದಳದ ಓರ್ವ ಸದಸ್ಯರಿದ್ದಾರೆ.

ಉಪ ಮೇಯರ್ ಚುನಾವಣೆಯೂ ಸೋಮವಾರ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News