ದಟ್ಟ ಮಂಜು: ದಿಲ್ಲಿ ವಿಮಾನ ನಿಲ್ದಾಣದ 100ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬ

Update: 2025-01-15 06:19 GMT

Photo credit: ANI

ಹೊಸದಿಲ್ಲಿ: ಬುಧವಾರ ಮುಂಜಾನೆ ದಟ್ಟ ಮಂಜು ಮುಸುಕಿದ ಕಾರಣ ಗೋಚರತೆ ಪ್ರಮಾಣ ಕುಸಿದಿದ್ದು ದಿಲ್ಲಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಬೇಕಿದ್ದ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ.

ಇಲ್ಲಿಯವರೆಗೆ ಯಾವುದೇ ವಿಮಾನ ಮಾರ್ಗ ಬದಲಾವಣೆ ಅಥವಾ ರದ್ದತಿಯ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 8.18ರ ವೇಳೆಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಂಡಿಗೊ ವಿಮಾನ ಯಾನ ಸಂಸ್ಥೆಯು, “ದಿಲ್ಲಿಯನ್ನು ಆವರಿಸಿರುವ ದಟ್ಟ ಮಂಜು ಹಾಗೂ ಕಡಿಮೆ ಗೋಚರತೆ ಪ್ರಮಾಣದ ಕಾರಣಕ್ಕೆ ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ನಾವು ಹವಾಮಾನ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ನೀವು ಎಲ್ಲಿಗೆ ಸುರಕ್ಷಿತವಾಗಿ ಹಾಗೂ ಸುಗಮವಾಗಿ ತಲುಪಬೇಕೊ ಅಲ್ಲಿಗೆ ತಲುಪಿಸಲು ನಾವು ನಮ್ಮೆಲ್ಲ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಹೇಳಿದೆ.

ಕ್ಯಾಟ್ III ತಂತ್ರಜ್ಞಾನ ಅಳವಡಿಸಿಕೊಳ್ಳದ ವಿಮಾನಗಳಿಗೆ ಮಾತ್ರ ತೊಂದರೆಯಾಗುವ ಸಾಧ್ಯತೆ ಇದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆ ಡಿಐಎಎಲ್ ಹೇಳಿದೆ.

ಕಡಿಮೆ ಗೋಚರತೆ ಪರಿಸ್ಥಿತಿಯಲ್ಲೂ ವಿಮಾನ ಹಾರಾಟಗಳಿಗೆ ಕ್ಯಾಟ್ III ತಂತ್ರಜ್ಞಾನ ಅವಕಾಶ ಕಲ್ಪಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News