ಚೀನಾದ ಎಚ್9ಎನ್2 ಸೋಂಕಿನಿಂದ ಭಾರತಕ್ಕೆ ಅಪಾಯ ಕಡಿಮೆ ; ಆರೋಗ್ಯ ಸಚಿವಾಲಯ

Update: 2023-11-24 15:36 GMT

ಸಾಂದರ್ಭಿಕ ಚಿತ್ರ | Photo: NDTV 

ಹೊಸದಿಲ್ಲಿ: ಚೀನಾದಲ್ಲಿ ಕಾಣಿಸಿಕೊಂಡಿದೆಯೆನ್ನಲಾದ ಎಚ್9ಎನ್2 ಇನ್ಫ್ಲುಯೆಂಝ ಸಾಂಕ್ರಾಮಿಕದ ಸೋಂಕಿಗೆ ಭಾರತ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

ಚೀನಾದಲ್ಲಿ ಮಕ್ಕಳ ಶ್ವಾಸಕೋಶದ ಕಾಯಿಲೆಗಳು ಮತ್ತು ನ್ಯುಮೋನಿಯ ಪ್ರಕರಣಗಳಲ್ಲಿ ಇತ್ತೀಚೆಗೆ ಉಂಟಾಗಿರುವ ಹೆಚ್ಚಳದ ಮೇಲೆ ತಾನು ನಿಕಟ ಇಗಾ ಇರಿಸಿರುವುದಾಗಿ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ಮಧ್ಯ ಭಾಗದಲ್ಲಿ ಚೀನಾದಲ್ಲಿ ಇನ್ಫ್ಲುಯೆಂಝವನ್ನು ಹೋಲುವ ಕಾಯಿಲೆಗಳ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಹಿಂದಿನ ಮೂರು ವರ್ಷಗಳಲ್ಲಿ ದೇಶದ ಶೂನ್ಯ-ಕೋವಿಡ್ ನೀತಿಯ ಭಾಗವಾಗಿ ಕಟ್ಟುನಿಟ್ಟಿನ ಕ್ರಮಗಳು ಚಾಲ್ತಿಯಲ್ಲಿದ್ದವು.

ಆರೋಗ್ಯ ಸಚಿವಾಲಯವು ತನ್ನ ಹೇಳಿಕೆಯಲ್ಲಿ, ಕಾಯಿಲೆಯ ಅಪಾಯ ಮಟ್ಟ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿದೆ. ‘‘ಈ ಕಾಯಿಲೆಯು ಮಾನವನಿಂದ ಮಾನವನಿಗೆ ಹರಡುವ ಸಂಭವ ಕಡಿಮೆ. ಈವರೆಗೆ ವಿಶ್ವಸಂಸ್ಥೆಗೆ ವರದಿಯಾಗಿರುವ ಎಚ್9ಎನ್2 ಇದರ ಮಾನವ ಪ್ರಕರಣಗಳಲ್ಲಿ ಸಾವಿನ ದರವು ಕಡಿಮೆಯಾಗಿದೆ’’ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಆದಾಗ್ಯೂ, ಎಚ್9ಎನ್2 ಹರಡುವಿಕೆಯ ಬಗ್ಗೆ ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ಆದರೆ, ಹೆಚ್ಚುತ್ತಿರುವ ಇನ್ಫ್ಲುಯೆಂಝದಂಥ ಕಾಯಿಲೆಗಳು ಮತ್ತು ನ್ಯುಮೋನಿಯ ಪ್ರಕರಣಗಳ ಬಗ್ಗೆ ಬೀಜಿಂಗ್ ನಿಂದ ಮಾಹಿತಿ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News