ಕಾಂಗ್ರೆಸ್‌ನ 11ನೇ ಪಟ್ಟಿ ಬಿಡುಗಡೆ: ಕಡಪಾ ಕ್ಷೇತ್ರದಿಂದ ವೈ.ಎಸ್. ಶರ್ಮಿಳಾ ಕಣಕ್ಕೆ
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ 17 ಅಭ್ಯರ್ಥಿಗಳನ್ನೊಳಗೊಂಡ ತನ್ನ 11ನೇ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಆಂಧ್ರ ಪ್ರದೇಶ, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಹೆಸರುಗಳಿವೆ. ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿರುವ ವೈ ಎಸ್ ಶರ್ಮಿಳಾ ರೆಡ್ಡಿ ಅವರನ್ನು ಕಡಪಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಈ ಕ್ಷೇತ್ರ ರೆಡ್ಡಿ ಕುಟುಂಬದ ಭದ್ರಕೋಟೆ ಎಂದು ತಿಳಿಯಲಾಗಿದ್ದು ಪ್ರಸ್ತುತ ಈ ಕ್ಷೇತ್ರವನ್ನು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಶರ್ಮಿಳಾ ಅವರ ಸೋದರ ಸಂಬಂಧಿ ಅವಿನಾಶ್ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ.
ಆಂದ್ರ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿಯಾಗಿರುವ ಶರ್ಮಿಳಾ ಈ ವರ್ಷದ ಜನವರಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು.
ಪಶ್ಚಿಮ ಬಂಗಾಳದ ದಾರ್ಜೆಲಿಂಗ್ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಡಾ. ಮುನೀಶ್ ತಮಂಗ್ ಅವರನ್ನು ಆಯ್ಕೆಮಾಡಿದೆ.
ರಾಜಮುಂದ್ರಿ ಕ್ಷೇತ್ರದ ಅಭ್ಯರ್ಥಿಯಾಗಿ ಗಿಡುಗು ರುದ್ರ ರಾಜು, ಬಪಟ್ಲಾ ಕ್ಷೇತ್ರದ ಅಭ್ಯರ್ಥಿಯಾಗಿ ಜೆ ಡಿ ಸೀಲಂ, ಕುರ್ನೂಲಿನಿಂದ ರಾಮಪುಲ್ಲಯ್ಯ ಯಾದವ್ ಕಣಕ್ಕಿಳಿಯಲಿದ್ದಾರೆ. ಬಿಹಾರದ ಕಿಶನ್‌ಗಂಜ್‌ನಿಂದ ಮೊಹಮ್ಮದ್ ಜಾವೇದ್, ಕತೀಹಾರ್‌ನಿಂದ ತಾರಿಖ್ ಅನ್ವರ್, ಭಗಲ್ಪುರದಿಂದ ಅಜೀತ್ ಶರ್ಮ, ಒಡಿಶಾದ ಬರ್ಘರ್‌ನಿಂದ ಸಂಜಯ್ ಭೊಯಿ, ಸಂದರಘರ್‌ನಿಂದ ಜನಾರ್ದನ್ ದೆಹುರಿ, ಬೊಲಂಗಿರ್‌ನಿಂದ ಮನೋಜ್ ಮಿಶ್ರಾ ಕಾಲಾಹಂಡಿಯಿಂದ ದ್ರೌಪದಿ ಮಝಿ, ಕಂಧಮಾಲ್‌ನಿಂದ ಅಮೀರ್ ಚಂದ್ ನಾಯಕ್, ಬರ್ಹಾಂಪುರ್‌ನಿಂದ ರಶ್ಮಿ ರಂಜನ್ ಪಟ್ನಾಯಕ್ ಹಾಗೂ ಕೋರಪುಟ್‌ನಿಂದ ಸಪ್ತಗಿರಿ ಶಂಕರ್ ಉಲಕ ಅವರಿಗೆ ಟಿಕೆಟ್ ನೀಡಲಾಗಿದೆ.