ಸಂವಿಧಾನವು ಕಾಲದ ಪ್ರತಿಯೊಂದೂ ಪರೀಕ್ಷೆಯನ್ನು ಗೆದ್ದಿದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

Update: 2024-12-29 15:43 GMT

ಪ್ರಧಾನಿ ಮೋದಿ | PC : PTI 

ಹೊಸದಿಲ್ಲಿ: ಸಂವಿಧಾನವು ಕಾಲದ ಪ್ರತಿಯೊಂದೂ ಪರೀಕ್ಷೆಯನ್ನು ಗೆದ್ದಿದೆ ಎಂದು ರವಿವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,‘ಅದು ನಮ್ಮ ಮಾರ್ಗದರ್ಶಕ ಬೆಳಕು ಆಗಿದೆ ’ಎಂದು ಪ್ರಶಂಸಿಸಿದರು.

ತನ್ನ ಮಾಸಿಕ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಮುಂದಿನ ಗಣರಾಜ್ಯೋತ್ಸವವು ಸಂವಿಧಾನ ಜಾರಿಯ 75ನೇ ವರ್ಷವನ್ನು ಗುರುತಿಸುತ್ತದೆ. ಇದು ನಮ್ಮೆಲ್ಲರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ಸಂವಿಧಾನವು ಕಾಲದ ಪ್ರತಿಯೊಂದೂ ಪರೀಕ್ಷೆಯನ್ನು ಗೆದ್ದಿದೆ. ಅದು ನಮ್ಮ ಮಾರ್ಗದರ್ಶಕ ಬೆಳಕು, ನಮ್ಮ ದಾರಿದೀವಿಗೆಯಾಗಿದೆ. ಸಂವಿಧಾನದಿಂದಾಗಿಯೇ ನಾನು ಜೀವನದಲ್ಲಿ ಈ ಸ್ಥಾನಕ್ಕೆ ತಲುಪಿದ್ದೇನೆ’ ಎಂದರು.

ಸಾಂವಿಧಾನಿಕ ಪರಂಪರೆಯೊಂದಿಗೆ ನಾಗರಿಕರನ್ನು ಸಂಪರ್ಕಿಸಲು ಆರಂಭಿಸಲಾಗಿರುವ ವೆಬ್‌ಸೈಟ್ ಛಿoಟಿsಣiಣuಣioಟಿ75.ಛಿom ಗೆ ಭೇಟಿ ನೀಡುವಂತೆ ಜನರನ್ನು ಕೇಳಿಕೊಂಡ ಮೋದಿ, ಅಲ್ಲಿ ಅವರು ವಿವಿಧ ಭಾಷೆಗಳಲ್ಲಿ ಸಂವಿಧಾನವನ್ನು ಓದಬಹುದು, ಪ್ರಶ್ನೆಗಳನ್ನು ಕೇಳಬಹುದು, ಅದರ ಪೀಠಿಕೆಗೆ ಸಂಬಂಧಿಸಿದಂತೆ ತಮ್ಮ ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು ಎಂದರು.

ತನ್ನ ಸರಕಾರವು ನ.26ರ ಸಂವಿಧಾನ ದಿನದಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆರಂಭಿಸಿದೆ ಎಂದೂ ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News