ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ದೇವಸ್ಥಾನಗಳ ಧ್ವಂಸಕ್ಕೆ ಆದೇಶ ನೀಡಿದ್ದಾರೆ: ಸಿಎಂ ಅತಿಶಿ ಆರೋಪ

Update: 2025-01-01 11:59 IST
Photo of Atishi and Lieutenant Governor VK Saxena

ದಿಲ್ಲಿ ಸಿಎಂ ಅತಿಶಿ ಮತ್ತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (PTI)

  • whatsapp icon

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಹಿಂದೂ ಮತ್ತು ಬೌದ್ಧ ಪೂಜಾ ಸ್ಥಳಗಳನ್ನು ಕೆಡವಲು ತಮ್ಮ ಕಚೇರಿಯಿಂದ ಆದೇಶ ಹೊರಡಿಸಿದ್ದಾರೆ ಎಂದು ದಿಲ್ಲಿ ಸಿಎಂ ಅತಿಶಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಇದು ಕೀಳು ಅಭಿರುಚಿಯ ರಾಜಕೀಯ ಎಂದು ತಳ್ಳಿ ಹಾಕಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅತಿಶಿ ಅವರ ಆರೋಪವನ್ನು ತಳ್ಳಿಹಾಕಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಹೇಳಿಕೆಯನ್ನು ಹೊರಡಿಸಿದೆ. ಯಾವುದೇ ಧಾರ್ಮಿಕ ರಚನೆಗಳು ಅಥವಾ ಯಾವುದೇ ದೇವಾಲಯಗಳು, ಮಸೀದಿಗಳು, ಚರ್ಚ್‌ ಗಳನ್ನು ಧ್ವಂಸ ಮಾಡಲಾಗುತ್ತಿಲ್ಲ. ಈ ಕುರಿತು ಯಾವುದೇ ಕಡತವೂ ಕಚೇರಿಗೆ ಬಂದಿಲ್ಲ ಎಂದು ಹೇಳಿದ್ದಾರೆ.

ನವೆಂಬರ್ 22ರಂದು 'ಧಾರ್ಮಿಕ ಸಮಿತಿ' ಸಭೆ ನಡೆಸಲಾಯಿತು ಮತ್ತು ಕೆಲವು ಧಾರ್ಮಿಕ ಕಟ್ಟಡಗಳನ್ನು ಕೆಡವಲು ಆದೇಶವನ್ನು ನೀಡಲಾಗಿದೆ. ಪಟೇಲ್ ನಗರ, ದಿಲ್ಶಾದ್ ಗಾರ್ಡನ್, ಸುಂದರ್ ನಾಗ್ರಿ, ಸೀಮಾ ಪುರಿ, ಗೋಕಲ್ ಪುರಿ ಮತ್ತು ಉಸ್ಮಾನ್‌ ಪುರದಲ್ಲಿ ಧಾರ್ಮಿಕ ಕೇಂದ್ರಗಳನ್ನು ಕೆಡವಲು ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ದಿಲ್ಲಿಯ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಚುನಾಯಿತ ಪ್ರತಿನಿಧಿಯಾಗಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಎಂದು ಲೆಫ್ಟಿನೆಂಟ್ ಗವರ್ನರ್‌ ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಅತಿಶಿ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ಕಳೆದ ವರ್ಷ ಹೊರಡಿಸಲಾದ ಆದೇಶವನ್ನು ಉಲ್ಲೇಖಿಸಿದ್ದು, ಧಾರ್ಮಿಕ ಕೇಂದ್ರಗಳ ಧ್ವಂಸವು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News