ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮುಂದುವರೆದ ಚೀತಾ ಸಾವಿನ ಸರಣಿ ; ಮತ್ತೊಂದು ಚೀತಾ ಸಾವು

Update: 2024-08-27 14:23 GMT

ಸಾಂದರ್ಭಿಕ ಚಿತ್ರ | PC : PTI

ಭೋಪಾಲ್ :‌ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚೀತಾಗಳ ಸಾವಿನ ಸರಣಿ ಮುಂದುವರೆದಿದ್ದು, ಮಂಗಳವಾರ ಬೆಳಿಗ್ಗೆ ಗಂಡು ಚೀತಾ ಪವನ್ ನೀರಿನಲ್ಲಿ ಮುಳಗಿ ಮೃತಪಟ್ಟಿದೆ ಎಂದು APCCF ಮತ್ತು ಲಯನ್ ಯೋಜನೆಯ ನಿರ್ದೇಶಕರು ತಿಳಿಸಿದ್ದಾರೆ.

ಆಗಸ್ಟ್ 5 ರಂದು ಐದು ತಿಂಗಳ ಚೀತಾ ಸಾವನ್ನಪ್ಪಿದ ವಾರಗಳ ನಂತರ ಮತ್ತೊಂದು ಚೀತಾದ ಸಾವಿನ ವರದಿ ಬಂದಿದೆ.

ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಯಾವುದೇ ಚಲನವಲನವಿಲ್ಲದೆ ತೊರೆಯ ಬಳಿಯಲ್ಲಿ ನಡುವೆ ಗಂಡು ಚಿರತೆ ಪವನ್ ಬಿದ್ದಿರುವುದು ಕಂಡುಬಂದಿದೆ. ಹತ್ತಿರದಿಂದ ಪರಿಶೀಲಿಸಿದಾಗ, ತಲೆ ಮಾತ್ರ ನೀರಿನೊಳಗೆ ಮುಳುಗಿದ್ದು, ಚೀತಾ ನಿಶ್ಚಲವಾಗಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ.

ಚೀತಾ ಪವನ್‌ ಮೃತಪಟ್ಟಿರುವುದು ಅರಿವಾದ ಕೂಡಲೇ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ನೀರಿನಿಂದ ಎತ್ತಿದ್ದಾರೆ. ಚೀತಾದ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎನ್ನಲಾಗಿದೆ. ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News