ನಾಳೆ ನಡೆಯಲಿದೆ ಲೋಕಸಭಾ ಚುನಾವಣೆಯ ಮತ ಎಣಿಕೆ

Update: 2024-06-03 15:47 GMT

PC : PTI 

ಹೊಸದಿಲ್ಲಿ : ಲೋಕಸಭಾ ಚುನಾವಣೆಯಲ್ಲಿ 8 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇವರಲ್ಲಿ ಶೇ. 16 ಅಭ್ಯರ್ಥಿಗಳನ್ನು ರಾಷ್ಟ್ರೀಯ ಪಕ್ಷಗಳು, ಶೇ. 6 ಅಭ್ಯರ್ಥಿಗಳನ್ನು ಪ್ರಾದೇಶಿಕ ಪಕ್ಷಗಳು ಕಣಕ್ಕಿಳಿಸಿವೆ. ಶೇ. 47 ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದ್ದಾರೆ ಎಂದು ಪಿ ಆರ್ ಎಸ್ ಲೆಜಿಸ್ಲೇಟಿವ್ ರಿಸರ್ಚ್ ರಿಪೋರ್ಟ್ ಹೇಳಿದೆ.

2024ರ ಸಾರ್ವತ್ರಿಕ ಚುನಾವಣೆ ಎಪ್ರಿಲ್ 19ರಿಂದ ಜೂನ್ 1ರ ವರೆಗೆ 7ಹಂತಗಳಲ್ಲಿ ನಡೆದಿದೆ. ಮತ ಎಣಿಕೆ ಜೂನ್ 4ರಂದು ನಡೆಯಲಿದೆ.

1996 ನಂತರ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 1996ರಲ್ಲಿ 13,952 ಅಭ್ಯರ್ಥಿಗಳು ಕಣದಲ್ಲಿದ್ದರು. 2019ರಲ್ಲಿ 8,039 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪಿಆರ್ಎಸ್ ಪ್ರಕಾರ 6 ರಾಷ್ಟ್ರೀಯ ಪಕ್ಷಗಳು ಸೇರಿದಂತೆ 744 ಪಕ್ಷಗಳ 8,360 ಅಭ್ಯರ್ಥಿಗಳು 543 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.

ಒಟ್ಟು ರಾಷ್ಟ್ರೀಯ ಪಕ್ಷಗಳಿಂದ ಶೇ. 16, ಪ್ರಾದೇಶಿಕ ಪಕ್ಷಗಳಿಂದ ಶೇ. 6 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅಲ್ಲದೆ, ಶೇ. 47ರಷ್ಟು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

6 ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಅತ್ಯಧಿಕ 448 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ 441, ಕಾಂಗ್ರೆಸ್ 328, ಸಿಪಿಐ (ಮಾರ್ಕ್ಸಿಸ್ಟ್) 52, ಆಮ್ ಆದ್ಮಿ ಪಕ್ಷ 22, ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪ್ರಾದೇಶಿಕ ಪಕ್ಷಗಳಲ್ಲಿ ಸಮಾಜವಾದಿ ಪಕ್ಷ 71, ತೃಣಮೂಲ ಕಾಂಗ್ರೆಸ್ 48 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರೊಂದಿಗೆ ಅತ್ಯಧಿಕ ಸಂಖ್ಯೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಎಐಎಡಿಎಂಕೆ 36, ಸಿಪಿಐ 30, ವೈಎಸ್ಆರ್ಸಿಪಿ 25, ಆರ್ಜೆಡಿ 24 ಹಾಗೂ ಡಿಎಂಕೆ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಅಸಂಘಟಿತ ಪಕ್ಷಗಳಲ್ಲಿ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಅತ್ಯಧಿಕ ಸಂಖ್ಯೆಯ (150) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅನಂತರ ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ (ಡೆಮಾಕ್ರೆಟಿಕ್) 79 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಪಿಆರ್ಎಸ್ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News