ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವೀಡಿಯೋ: ಪ್ರಮುಖ ಆರೋಪಿಯ ಬಂಧನ

Update: 2024-01-20 10:22 GMT

ನಟಿ ರಶ್ಮಿಕಾ ಮಂದಣ್ಣ (PTI) 

ಹೊಸದಿಲ್ಲಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ದಿಲ್ಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಇಂದು ಬಂಧಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ ತಿಂಗಳಿನಲ್ಲಿ ರಶ್ಮಿಕಾ ಅವರ ಡೀಪ್‌ಫೇಕ್‌ ವೀಡಿಯೋ ವೈರಲ್‌ ಆಗಿತ್ತು ಅದರಲ್ಲಿ ಕಪ್ಪು ವರ್ಕೌಟ್‌ ಉಡುಪು ಧರಿಸಿದ್ದ ಬ್ರಿಟಿಷ್-ಭಾರತೀಯ ಇನ್‌ಫ್ಲೂಯೆನ್ಸರ್‌ ಝಾರಾ ಪಟೇಲ್‌ ಅವರ ಮುಖವನ್ನು ಎಡಿಟ್‌ ಮಾಡಿ  ರಶ್ಮಿಕಾ ಮುಖ ತೋರಿಸಲಾಗಿತ್ತು.

ಇದರ ಬೆನ್ನಲ್ಲೇ ದಿಲ್ಲಿ ಪೊಲೀಸರು ಐಪಿಸಿ ಸೆಕ್ಷನ್‌ 467 ಮತ್ತು 469 ಹಗೂ ಐಟಿ ಕಾಯಿದೆ 20000 ಇದರ ಸೆಕ್ಷನ್‌ 66ಸಿ ಹಾಗೂ 66ಇ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ತಮ್ಮ ಡೀಪ್‌ಫೇಕ್‌ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದ ರಶ್ಮಿಕಾ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಲ್ಲದೆ ಈ ವೀಡಿಯೋ ನೋಡಿ ತುಂಬಾ ನೋವಾಯಿತು ಎಂದಿದ್ದರು.

ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಕಠಿಣ ಎಚ್ಚರಿಕೆ ನೀಡಿತ್ತಲ್ಲದೆ ಡೀಪ್‌ಫೇಕ್‌ ಮತ್ತಿತರ ವಿಚಾರಗಳಲ್ಲಿ ಕಾನೂನು ಕ್ರಮದ ಬಗ್ಗೆ ತಿಳಿಸಿತ್ತು.

ಇತ್ತೀಚೆಗೆ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರ ಡೀಪ್‌ಫೇಕ್‌ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News