ಮಹಿಳೆಯರ ವಿರುದ್ಧ ಅಪರಾಧ ಅಕ್ಷಮ್ಯ ಪಾಪ: ಪ್ರಧಾನಿ ಮೋದಿ

Update: 2024-08-25 14:26 GMT

Photo : PTI

ಮುಂಬೈ : ಮಹಿಳೆಯರ ವಿರುದ್ಧ ಅಪರಾಧ ಅಕ್ಷಮ್ಯ ಪಾಪವಾಗಿದೆ ಮತ್ತು ತಪ್ಪಿತಸ್ಥರನ್ನು ಬಿಡಕೂಡದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ರವಿವಾರ ಮಹಾರಾಷ್ಟ್ರದ ಜಲಗಾಂವ್ನಲ್ಲಿ ಲಖಪತಿ ದೀದಿ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, "ತಾಯಂದಿರು, ಸೋದರಿಯರು ಮತ್ತು ಪುತ್ರಿಯರ ಸಬಲೀಕರಣ ಹೆಚ್ಚುತ್ತಿರುವ ಜೊತೆಗೆ ಅವರ ಸುರಕ್ಷತೆಯೂ ದೇಶದ ಆದ್ಯತೆಯಾಗಿದೆ. ನಾನು ಕೆಂಪುಕೋಟೆಯಿಂದ ಪದೆ ಪದೇ ಈ ವಿಷಯವನ್ನು ಎತ್ತಿದ್ದೇನೆ. ದೇಶದ ಯಾವುದೇ ರಾಜ್ಯವಾಗಿರಲಿ, ನನ್ನ ಸೋದರಿಯರು ಮತ್ತು ಪುತ್ರಿಯರ ನೋವು ಮತ್ತು ಸಿಟ್ಟನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ" ಎಂದು ಹೇಳಿದರು.

‘ಮಹಿಳೆಯರ ವಿರುದ್ಧ ಅಪರಾಧ ಅಕ್ಷಮ್ಯ ಪಾಪ ಎಂದು ನಾನು ದೇಶದ ಪ್ರತಿಯೊಂದು ರಾಜಕೀಯ ಪಕ್ಷ,ಪ್ರತಿಯೊಂದು ರಾಜ್ಯ ಸರಕಾರಕ್ಕೆ ಮತ್ತೊಮ್ಮೆ ಹೇಳುತ್ತಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಕೂಡದು ’ ಎಂದರು.

‘ಇಂತಹ ತಪ್ಪಿತಸ್ಥರಿಗೆ ಯಾವುದೇ ರೀತಿಯಲ್ಲಿ ನೆರವು ನೀಡುವವರನ್ನೂ ಬಿಡಬಾರದು. ಅದು ಆಸ್ಪತ್ರೆ, ಶಾಲೆ, ಸರಕಾರ ಅಥವಾ ಪೋಲಿಸ್ ವ್ಯವಸ್ಥೆಯಾಗಿರಲಿ,!ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ಉಂಟಾದರೂ ಪ್ರತಿಯೊಬ್ಬರನ್ನೂ ಹೊಣೆಯಾಗಿಸಬೇಕು. ಈ ಸಂದೇಶವು ಮೇಲಿನಿಂದ ಕೆಳಗಿನವರೆಗೂ ಸ್ಪಷ್ಟವಾಗಿ ಅನ್ವಯಿಸುತ್ತದೆ. ಈ ಪಾಪವು ಅಕ್ಷಮ್ಯವಾಗಿದೆ. ಸರಕಾರಗಳು ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ಆದರೆ ಒಂದು ಸಮಾಜವಾಗಿ ಮತ್ತು ಒಂದು ಸರಕಾರವಾಗಿ ಮಹಿಳೆಯರನ್ನು ರಕ್ಷಿಸುವುದು, ಅವರ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯಾಗಿದೆ ’ ಎಂದು ಮೋದಿ ಹೇಳಿದರು.

ಕೋಲ್ಕತಾದ ಸರಕಾರಿ ಆರ್ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದೈಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳ ನಡುವೆ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News