ಮಹಾರಾಷ್ಟ್ರದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸುಳಿವು ನೀಡಿದ ಡಿಸಿಎಂ ದೇವೇಂದ್ರ ಫಡ್ನವಿಸ್

Update: 2024-10-16 13:50 GMT

ದೇವೇಂದ್ರ ಫಡ್ನವಿಸ್ | PTI 

ಮುಂಬೈ: ಮುಹಾಯುತಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲಿಯೇ ಕುಳಿತಿದ್ದು, ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸಬೇಕಾದ ಅಗತ್ಯ ಮಹಾಯುತಿ ಮೈತ್ರಿಕೂಟಕ್ಕೆ ಇಲ್ಲ ಎಂದು ಯಾರದೇ ಹೆಸರನ್ನು ಉಲ್ಲೇಖಿಸದೆ ಹೇಳುವ ಮೂಲಕ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಂದ್ರ ಫಡ್ನವಿಸ್, "ನಮ್ಮ ಮುಖ್ಯಮಂತ್ರಿಗಳು ಇಲ್ಲಿಯೇ ಕುಳಿತಿದ್ದಾರೆ" ಎಂದು ಘೋಷಿಸಿದರು.

"ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸುತ್ತಿಲ್ಲ. ಯಾಕೆಂದರೆ, ಚುನಾವಣೆ ಮುಗಿದ ನಂತರ ಆ ಅಭ್ಯರ್ಥಿಯು ಮುಖ್ಯಮಂತ್ರಿ ಹುದ್ದೆಗೇರುತ್ತಾರೆ ಎಂಬ ಬಗ್ಗೆ ಅವರಿಗೇ ವಿಶ್ವಾಸವಿಲ್ಲ" ಎಂದು ಅವರು ವಿರೋಧ ಪಕ್ಷದ ಕಾಲೆಳೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News