ಒಂದೇ ಕುಟುಂಬದ ಏಳು ಮಂದಿಯ ಮೃತದೇಹಗಳು ಪತ್ತೆ; ಸಾಮೂಹಿಕ ಆತ್ಮಹತ್ಯೆಯ ಶಂಕೆ

Update: 2023-10-28 16:42 GMT

ಸೂರತ್: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನರು ಶನಿವಾರ ಸೂರತ್‌ನ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದು,ಇದು ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂದು ಪೋಲಿಸರು ಶಂಕಿಸಿದ್ದಾರೆ.

ಅದಜಾನ್ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಏಳು ಜನರ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಲಭಿಸಿರುವ ಚೀಟಿಯೊಂದರಲ್ಲಿ ಹಣಕಾಸು ಮುಗ್ಗಟ್ಟು ಕುಟುಂಬದ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿದೆ ಎಂದು ಪೋಲಿಸರು ತಿಳಿಸಿದರು.

‘ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕುಟುಂಬದ ಯಜಮಾನ ಮನೀಷ ಸೋಲಂಕಿಯ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿತ್ತು. ಆತನ ಪತ್ನಿ, ಹೆತ್ತವರು ಮತ್ತು ಮೂವರು ಮಕ್ಕಳು ವಿಷ ಸೇವಿಸಿ ಮೃತಪಟ್ಟಿದ್ದು, ಅವರ ಶವಗಳು ಮಂಚದಲ್ಲಿ ಮತ್ತು ನೆಲದಲ್ಲಿ ಬಿದ್ದುಕೊಂಡಿದ್ದವು. ಸಾವಿಗೆ ನಿಖರ ಕಾರಣವನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಡಿಸಿಪಿ ಆರ್.ಪಿ.ಬಾರೋಟ್ ತಿಳಿಸಿದರು.

ಬೇರೆಯವರಿಗೆ ನೀಡಿದ್ದ ಸಾಲ ವಾಪಸಾಗದೆ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು ಎಂದು ಚೀಟಿಯಲ್ಲಿ ಬರೆಯಲಾಗಿದ್ದು.ವಿಷದ ಬಾಟ್ಲಿಯೊಂದು ಸ್ಥಳದಲ್ಲಿ ಪತ್ತೆಯಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News