ಕಾರಾಗೃಹದಿಂದ ದಿಲ್ಲಿ ಸರಕಾರ ನಡೆಸಲು ಸಾಧ್ಯವಿಲ್ಲ : ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ
Update: 2024-03-27 15:26 GMT
ಹೊಸದಿಲ್ಲಿ: ಕಾರಾಗೃಹದಿಂದ ಸರಕಾರ ನಡೆಸಲು ಸಾಧ್ಯವಿಲ್ಲ ಎಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಬುಧವಾರ ಹೇಳಿದ್ದಾರೆ.
ಕಾರಾಗೃಹದ ಒಳಗೆ ಇದ್ದರೂ ಅರವಿಂದ ಕೇಜ್ರಿವಾಲ್ ಅವರು ಅಲ್ಲಿಂದಲೇ ಸರಕಾರವನ್ನು ನಡೆಸಲಿದ್ದಾರೆ ಎಂದು ಆಪ್ ನಾಯಕರ ಹೇಳಿಕೆಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾರ್ಚ್ 21ರಂದು ಬಂಧಿಸಿತ್ತು. ಅನಂತರ ಇಲ್ಲಿನ ನ್ಯಾಯಾಲಯ ಅವರನ್ನು ಮಾರ್ಚ್ 28ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.
‘ಟೈಮ್ಸ್ ನೌ ಸಭೆ’ಯಲ್ಲಿ ಮಾತನಾಡಿದ ಸಕ್ಸೇನಾ, ‘‘ಜೈಲಿನಿಂದ ಸರಕಾರವನ್ನು ನಡೆಸುವುದಿಲ್ಲ ಎಂದು ನಾನು ದಿಲ್ಲಿಯ ಜನರಿಗೆ ಭರವಸೆ ನೀಡುತ್ತೇನೆ’’ ಎಂದಿದ್ದಾರೆ.